ಕುಶಾಲನಗರ, ಸೆ. ೧೪: ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್‌ನ ಏಳನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅನ್ನದಾನ ಮತ್ತು ಗಿಡನೆಡುವ ಕಾರ್ಯಕ್ರಮ ಏರ್ಪಡಿಸಲಾಯಿತು.
ಏಳನೇ ವಾರ್ಷಿಕೋತ್ಸವ ಹಿನೆÀ್ನಲೆ ಹಾಗೂ ಐಮರಾದ ಪ್ರಮುಖರಾದ ಭಾವೇಶ್ ಸೋಲಂಕಿ ಅವರ ಸ್ಮರಣಾರ್ಥ ಕೊಡಗು ಜಿಲ್ಲಾ ಐಮರಾ ಘಟಕದ ವತಿಯಿಂದ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ಸುಂದರನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಿಡನೆಟ್ಟು, ಐಮರಾದ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಐಮರಾ ಜಿಲ್ಲಾಧ್ಯಕ್ಷ ಫರೀದ್, ಆಲ್ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ ನ ಏಳನೇ ವರ್ಷಾಚರಣೆ ಹಾಗೂ ಐಮರಾದ ಪ್ರಮುಖರಾದ ಭಾವೇಶ್ ಸೋಲಂಕಿ ಅವರ ನೆನಪಿನಾರ್ಥವಾಗಿ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮ ಹಾಗೂ ಸುಂದರನಗರದ ಡಿಗ್ರಿ ಕಾಲೇಜಿನಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕುಶಾಲನಗರದ ಮೊಬೈಲ್ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭ ಪ.ಪಂ ಸದಸ್ಯ ಅಮೃತ್ ರಾಜ್, ಐಮರಾ ಪ್ರಮುಖರಾದ ಸುರೇಶ್ ಹಾಗೂ ಕುಶಾಲನಗರದ ಮೊಬೈಲ್ ವರ್ತಕರಾದ ರವಿನಾಥ್, ಸಾಹುಲ್, ಫಜಲ್, ರಮೇಶ್, ತವಾಬ್, ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮತ್ತಿತರರು ಇದ್ದರು.