ಕೂಡಿಗೆ, ಸೆ. ೧೪: ಕೊಡಗು ಜಿಲ್ಲೆಯ ಕಾಬ್‌ಸೆಟ್ ಸಂಸ್ಥೆ ವತಿಯಿಂದ ಯೂನಿಯನ್ ಆರ್ ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಕೂಡಿಗೆಯಲ್ಲಿ ಹಮ್ಮಿಕೊಂಡಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ೧೮ ರಿಂದ ೪೫ ವರ್ಷದೊಳಗಿನ ನಿರುದ್ಯೋಗಿ ಯುವಕ - ಯುವತಿಯರಿಗೆ ಸ್ವ ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲಕ್ಕಾಗಿ ೧೦ ದಿನಗಳ ಹೈನುಗಾರಿಕೆ ತರಬೇತಿ ತಾ. ೨೧ ರಿಂದ ೩೦ ರವರೆಗೆ ನಡೆಯಲಿದೆ. ತರಬೇತಿ ವೇಳೆ ಊಟ, ವಸತಿ ಉಚಿತ ವ್ಯವಸ್ಥೆಯಿದೆ. ಮಾಹಿತಿಗಾಗಿ ಯೂನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರ ಕೂಡಿಗೆ ಅಥವಾ ಮೊ. ೯೬೮೬೪೦೬೧೮೧, ೯೪೪೯೪೦೨೦೮೧, ೯೪೪೯೬೧೪೬೭೯ ಸಂಪರ್ಕಿಸ ಬಹುದಾಗಿದೆ.