ಮಡಿಕೇರಿ, ಸೆ. ೧೪: ಹಲವಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಸಣ್ಣದಾದ ಜಾಗದಲ್ಲಿ ಇದೀಗ ದಿಢೀರಾಗಿ ಗುಡಿಯೊಂದು ನಿರ್ಮಾಣಗೊಂಡಿದ್ದು, ವಿವಾದಕ್ಕೆ ಈಡಾಗುವದರೊಂದಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇದೀಗ ಮಡಿಕೇರಿ ನಗರಸಭೆಯಿಂದ ಜಾಗದ ಹದ್ದು ಬಸ್ತು ಗುರುತಿಸಲು ಸರ್ವೆ ಕಾರ್ಯಕ್ಕೆ ಮುಂದಾಗಿರುವ ಬಗ್ಗೆ ತಿಳಿದು ಬಂದಿದೆ.
ಮಡಿಕೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. ೧೩ರಲ್ಲಿ ಇರುವ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಸನಿಹ ಇಳಿಜಾರು ಪ್ರದೇಶದಲ್ಲಿ ತ್ರಿಕೋನಾಕಾರದ ಖಾಲಿ ಜಾಗ ಅನೇಕ ವರ್ಷಗಳಿಂದ ಇದೆ. ಇದೀಗ ಆ ಸ್ಥಳದಲ್ಲಿ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ವತಿಯಿಂದ ತ್ರಿಕೋನಾಕಾರದ ಗುಡಿ ನಿರ್ಮಿಸಲಾಗಿದ್ದು, ತಗಡಿನ ಶೀಟು ಗಳ ಮೇಲ್ಛಾವಣಿ ಹೊದಿಸಲಾಗಿದೆ.
ಆದರೆ, ಈಗ ತಮ್ಮ ತಂದೆ ಹಾಗೂ ಅವರ ಸಹೋದರರಿಗೆ ಸೇರಿದ್ದಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ ಈ ಜಾಗದಲ್ಲಿ ಯಾವದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಇದೀಗ ದೇವಾಲಯ ಸಮಿತಿಯವರು ಯಾವದೇ ಅನುಮತಿ ಪಡೆದುಕೊಳ್ಳದೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದು, ಇದಕ್ಕೆ ಅವಕಾಶ ನೀಡಬಾರದೆಂದು ಎ.ಪಿ. ರಾಧ ಎಂಬವರು ನಗರಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಜಾಗದ ಬಗ್ಗೆ ಸೂಕ್ತ ದಾಖಲೆ, ಸರ್ವೆ ನಕಾಶೆಗಳನ್ನು ಸಲ್ಲಿಸುವಂತೆ ರಾಧ ಹಾಗೂ ದೇವಾಲಯ ಸಮಿತಿಯವರಿಗೆ ನಗರಸಭೆಯಿಂದ ತಾ. ೨೭.೭.೨೦೨೧ ರಂದು ನೋಟೀಸ್ ನೀಡಲಾಗಿತ್ತು. ಈ ಸಂಬAಧ ರಾಧ ಅವರು ದಾಖಲೆಗಳನ್ನು ಸಲ್ಲಿಸಿದರೆ, ಇತ್ತ ದೇವಾಲಯ ಸಮಿತಿಯವರೂ ಕೂಡ ಈ ಜಾಗ ದೇವಾಲಯಕ್ಕೆ ಸೇರಿ ದ್ದಾಗಿದ್ದು, ಕಳೆದ ೪೦-೫೦ ವರ್ಷ ಗಳಿಂದ ಅದೇ ಜಾಗದಲ್ಲಿ ಪೂಜೆ, ಕಾರ್ಯಗಳನ್ನು ಸಲ್ಲಿಸುತ್ತಾ ಬರುತ್ತಿರು ವದಾಗಿ ಮಾಹಿತಿ ಒದಗಿಸಿದ್ದಾರೆ.
ಸರ್ವೆಗೆ ಸೂಚನೆ: ಈ ವಿಚಾರ ವಿವಾದ ಹಾಗೂ ಗೊಂದಲಗಳಿAದ ಕೂಡಿರುವದ ರಿಂದ ಹಾಗೂ ಉಭಯ ಕಡೆಯವರು ಜಾಗ ತಮ್ಮದೆಂದು ಹೇಳುತ್ತಿರುವದರಿಂದ ಈ ಜಾಗ ಯಾರಿಗೆ ಸೇರಿದ್ದೆಂದು ತೀರ್ಮಾನಿಸುವ ಸಲುವಾಗಿ ಜಾಗದ ಸರ್ವೆ ಕಾರ್ಯ ಮಾಡಿ ಹದ್ದು ಬಸ್ತು ಗುರುತಿಸಿಕೊಡುವಂತೆ ನಗರಸಭೆ ಯಿಂದ ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಾ. ೩೧.೭.೨೦೨೧ ರಂದು ಪತ್ರದ ಮೂಲಕ ಸೂಚಿಸಲಾಗಿದೆ.
ಅನುಮತಿ ಪಡೆದಿಲ್ಲ
ಖಾಲಿ ಜಾಗ ಯಾರಿಗೆ ಸೇರಿದ್ದೆಂಬ ಗೊಂದಲದಲ್ಲಿ ಇರುವಾಗಲೇ ಅಲ್ಲಿ ಕಟ್ಟಡ ನಿರ್ಮಿಸ ಲಾಗಿದೆ. ಆದರೆ ಸಂಬAಧಿಸಿದ ಪ್ರಾಧಿಕಾರಿಗಳಿಂದ ಯಾವದೇ ಅನುಮತಿ ಪಡೆದುಕೊಂಡಿಲ್ಲವೆAದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಸರ್ವೆ ಮೂಲಕ ಗೊಂದಲಕ್ಕೆ ತೆರೆ ಎಳೆಯಲು ನಗರಸಭೆ ಮುಂದಾಗಿದೆ.
?ಸAತೋಷ್