ಸೋಮವಾರಪೇಟೆ, ಸೆ. ೧೩: ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸುತ್ತಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸ್ ಫಾರೆಸ್ಟ್ ಸ್ಕಾ÷್ವಡ್ನ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತಾಲೂಕಿನ ಆಲೂರು ಸಿದ್ದಾಪುರದ ಹಿತ್ಲಗದ್ದೆಯ ಸುಜಯ್ ಎಂಬಾತ ತನ್ನ ಮೋಟಾರ್ ಬೈಕ್ನಲ್ಲಿ ಸುಮಾರು ೧ ಲಕ್ಷ ರೂಪಾಯಿ ಮೌಲ್ಯದ ೨೦ ಕೆ.ಜಿ.ಯಷ್ಟು ಶ್ರೀಗಂಧವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ ಪೊಲೀಸ್ ಫಾರೆಸ್ಟ್ ಸ್ಕಾ÷್ವಡ್ನ ಸಿಬ್ಬಂದಿಗಳು, ಗೋಣಿಮರೂರು ಬಳಿಯಲ್ಲಿ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ಫಾರೆಸ್ಟ್ ಸ್ಕಾ÷್ವಡ್ನ ವರಿಷ್ಠಾಧಿಕಾರಿ ಸುರೇಶ್ಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್.ಐ. ಅಪ್ಪಾಜಿ, ಸಿಬ್ಬಂದಿಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಮೋಹನ್ ಸೇರಿದಂತೆ ಇತರರು ಭಾಗವಹಿಸಿದ್ದರು.