ಕಣಿವೆ, ಸೆ. ೧೩ : ಕಾಫಿ ತೋಟದ ಬೇಲಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಹರಿಬಿಟ್ಟ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಗಂಡಾನೆಯೊAದು ಸಾವನ್ನಪ್ಪಿರುವ ದುರ್ಘಟನೆ ಕಾವೇರಿ ನದಿ ದಂಡೆಯ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಎಂಭತ್ತೆಕರೆ ಪೈಸಾರಿ ಎಂಬಲ್ಲಿ ಸೂರ್ಲಬ್ಬಿ ಮೂಲದವರಾದ ಜೇಸನ್ ಸನ್ನಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ನಡೆದಿದೆ.

ಅಂದಾಜು ೨೮ ರ ಪ್ರಾಯದ್ದು ಎನ್ನಲಾದ ಈ ಸಲಗ ಎರಡರಿಂದ ಎರಡೂವರೆ ಅಡಿಗಳಷ್ಟು ಉದ್ದದ ಎರಡು ದಂತಗಳನ್ನು ಹೊಂದಿದೆ. ಗುಂಪು ಆನೆಗಳಿಂದ ಬೇರ್ಪಟ್ಟ ಈ ಸಲಗ ಆಗಿಂದಾಗ್ಗೆ

(ಮೊದಲ ಪುಟದಿಂದ) ಗುಡ್ಡೆಹೊಸೂರು, ಬಸವನಹಳ್ಳಿ, ಆನೆಕಾಡು, ರಾಣಿಗೇಟ್, ಮರೂರು, ಎಂಭತ್ತೆಕರೆ ಮೊದಲಾದ ಪ್ರದೇಶಗಳತ್ತ ರಾತ್ರೋ ರಾತ್ರಿ ತೆರಳಿ ರೈತರು ಬೆಳೆದ ಫಸಲು ತುಳಿದು, ತಿಂದು ನಾಶಪಡಿಸಿ ಕಾಡಿಗೆ ಮರಳುತ್ತಿತ್ತು ಎನ್ನಲಾಗಿದೆ.

ಆದರೆ ಭಾನುವಾರ ರಾತ್ರಿ ಆನೆಕಾಡು ಅರಣ್ಯದಿಂದ ನಾಡಿಗೆ ಧಾವಿಸಿದ ಈ ಸಲಗ ಗುಡ್ಡೆಹೊಸೂರು ಬಳಿಯ ತೆಪ್ಪದ ಕಂಡಿ ಬಳಿ ಕಾವೇರಿ ನದಿಯನ್ನು ದಾಟಿ ಮರೂರು ಗ್ರಾಮದ ಕೃಷಿಕರು ಬೆಳೆದ ಜೋಳ ಹಾಗೂ ಬಾಳೆ ಫಸಲನ್ನು ತಿಂದು ಎಂಭತ್ತೆಕರೆ ಪೈಸಾರಿಯಲ್ಲಿನ ಕಾಫಿ ತೋಟದ ಮೂಲಕ ಮರಳುತ್ತಿದ್ದಾಗ ತೋಟದ ಬೇಲಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಹರಿಯಬಿಟ್ಟಿದ್ದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಲಗ ದಾರುಣವಾಗಿ ಮೃತಪಟ್ಟಿದೆ.

ಇತ್ತೀಚೆಗೆ ಆನೆಕಾಡು ಬಳಿಯ ಬಸವನಹಳ್ಳಿ ಬಳಿ ಇದೇ ಮಾದರಿಯಲ್ಲಿ ಅಡಿಕೆ ತೋಟಕ್ಕೆ ಅಳವಡಿಸಿದ್ದ ಸೋಲಾರ್ ತಂತಿ ಬೇಲಿಗೆ ಹರಿಸಿದ್ದ ವಿದ್ಯುತ್ ತಗುಲಿ ಮತ್ತೊಂದು ಸಲಗ ಅಮಾನುಷವಾಗಿ ಸಾವನ್ನಪ್ಪಿದ್ದನ್ನು ಸ್ಮರಿಸಬಹುದು. ಸೋಮವಾರ ಮುಂಜಾನೆ ಎಂಭತ್ತೆಕರೆ ಬಳಿ ಸಲಗ ಮೃತಪಟ್ಟ ಘಟನಾ ಸ್ಥಳಕ್ಕೆ ಬಂಡೀಪುರದ ವನ್ಯಜೀವಿ ವಿಭಾಗದ ಡಾ. ವಾಸಿಂ ಎಂಬ ವೈದ್ಯರು ಆಗಮಿಸಿ ಮೃತ ಸಲಗದ ಮರಣೋತ್ತರ ಪರೀಕ್ಷೆ ನಡೆಸಿದರು. ಹುಣಸೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಹನುಮಂತರಾಜು ಈ ಸಂದರ್ಭ ಇದ್ದರು.

ಅರಣ್ಯಾಧಿಕಾರಿಗಳು ಹಾಗೂ ಚೆಸ್ಕಾಂ ಅಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ. ಕಾಡಾನೆ ಮೇಲೆ ವಿದ್ಯುತ್ ಹರಿಸಿರುವುದು ಮೇಲ್ನೋಟಕ್ಕೆ ಕಂಡುಬAದಿದೆ ಎಂದು ಹೇಳಿರುವ ಅರಣ್ಯಾಧಿಕಾರಿ ಹನುಮಂತರಾಜು, ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳು ನೀಡುವ ವರದಿಯ ಆಧಾರದ ಮೇಲೆ ಸಂಬAಧಪಟ್ಟ ಕಾಫಿ ತೋಟದ ಮಾಲೀಕರ ವಿರುದ್ಧ ಅರಣ್ಯ ವನ್ಯ ಜೀವಿಗಳ ಸಂರಕ್ಷಣಾ ಕಾಯಿದೆ ಹಾಗೂ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ವನ್ಯಜೀವಿಗಳ ಮೇಲೆ ಹರಿಸಿರುವ ಪ್ರಕರಣದ ಪ್ರಕಾರ ಪ್ರತ್ಯೇಕವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.