ಸುಂಟಿಕೊಪ್ಪ, ಸೆ. ೧೩: ಇಲ್ಲಿನ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ವಿಶ್ವಹಿಂದೂ ಪರಿಷದ್ ವತಿಯಿಂದ ಗೌರಿ ಗಣೇಶೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಿದ್ದು, ದಾನಿಗಳು ಭಕ್ತಾಧಿಗಳು ದೇಣಿಗೆ ನೀಡಿದ ಉಳಿಕೆ ಹಣದಿಂದ ಶ್ರೀ ಕೋದಂಡರಾಮ, ಲಕ್ಷö್ಮಣ, ಸೀತಾ ದೇವಿಗೆ ಬೆಳ್ಳಿ ಕವಚವನ್ನು ಸಮಿತಿಯಿಂದ ಖರೀದಿಸಿ ತೊಡಿಸಲಾಯಿತು.

ದಾನಿಗಳಿಂದ ದೇಣಿಗೆಯಾಗಿ ಬಂದ ಹಣದಲ್ಲಿ ಉಳಿಕೆಯಾಗಿದ್ದ ೨,೩೦,೦೦೦ ರೂ. ವೆಚ್ಚದಲ್ಲಿ ಶ್ರೀ ಕೋದಂಡ ರಾಮ, ಲಕ್ಷö್ಮಣ, ಸೀತಾ ದೇವಿಗೆ ಬೆಳ್ಳಿ ಕವಚವನ್ನು ತೊಡಿಸ ಲಾಗಿದೆ. ಇದರೊಂದಿಗೆ ಇನ್ವರ್ಟರ್, ಧ್ವನಿವರ್ಧಕ, ದೇವಾಲಯದ ಗರ್ಭಗುಡಿ ಮುಂಭಾಗದಲ್ಲಿ ಸ್ಟೀಲ್‌ನ ರಕ್ಷಾ ಕವಚವನ್ನು ಭಕ್ತಾಧಿಗಳ ಅನುಕೂಲಕ್ಕೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಶ್ರೀ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್À (ಪುಟ್ಟ), ಕಾರ್ಯದರ್ಶಿ ಸುರೇಶ್ ಗೋಪಿ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.