ನಾಪೋಕ್ಲು, ಸೆ. ೧೩: ಇಲ್ಲಿನ ರಾಮಮಂದಿರದ ಗಣಪತಿ ದೇವಾಲಯದ ದೇವರ ವಿಗ್ರಹಕ್ಕೆ ಬೆಳ್ಳಿಯ ಮುಖವಾಡವನ್ನು ಸಮರ್ಪಿಸಲಾಯಿತು. ಪ್ರಸ್ತುತ ಕುಶಾಲನಗರದ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿರುವ ಕಾಶಿಕುಮಾರ್ ಮತ್ತು ವಸಂತಲಕ್ಷಿö್ಮ ದಂಪತಿ ರೂ.೩.೫ ಲಕ್ಷ ಮೌಲ್ಯದ ಬೆಳ್ಳಿ ಮುಖವಾಡವನ್ನು ದೇವಾಲಯಕ್ಕೆ ನೀಡಿದರು. ಈ ಸಂದರ್ಭ ಶ್ರೀ ರಾಮ ಟ್ರಸ್ಟ್ ಅಧ್ಯಕ್ಷ ಡಾ.ಬೊಪ್ಪಂಡ ಜಾಲಿ ಬೋಪಯ್ಯ, ನಿರ್ದೇಶಕರಾದ ಅರೆಯಡ ಸೋಮಪ್ಪ, ಅರ್ಚಕ ರವಿ ಉಡುಪ ಇದ್ದರು.