ಸಿದ್ದಾಪುರ, ಸೆ ೧೩: ನೆಲ್ಯಹುದಿಕೇರಿ ರಸ್ತೆ ಅಗಲೀಕರಣ ಸಂಬAಧ ರಸ್ತೆ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಕೆಡವಿ ನವೀಕರಣಕ್ಕೆ ಮುಂದಾಗಿದ್ದಾರೆ.

ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ರಸ್ತೆ ಮಧ್ಯ ಭಾಗದಿಂದ ೭.೫ ಮೀಟರ್ ಅಂತರದಲ್ಲಿ ಇರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಕಾಮಗಾರಿ ಮಾಡಲು ಲೋಕೋಪಯೋಗಿ

(ಮೊದಲ ಪುಟದಿಂದ) ಇಲಾಖೆಯು ಕಾರ್ಯಯೋಜನೆ ಕೈಗೆತ್ತಿಕೊಂಡಿದೆ. ಪಟ್ಟಣದ ಎರಡು ಬದಿ ಅಂಗಡಿ ಮಳಿಗೆಗಳ ಮಾಲೀಕರಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಮುಖಾಂತರ ನೋಟೀಸ್ ಜಾರಿ ಮಾಡಲಾಗಿದೆ. ರೂ. ೨ ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯಲಿದೆ. ಈ ಕಾಮಗಾರಿಯು ೫೦೫೪ ಯೋಜನೆಯಡಿಯಲ್ಲಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ. ಈ ಸಂಬAಧ ಕಟ್ಟಡ ನವೀಕರಣ ಕಾರ್ಯಕ್ಕೆ ಮಾಲೀಕರು ಮುಂದಾಗಿದ್ದಾರೆ.

ಚಿತ್ರ ವರದಿ : ವಾಸು ಎ.ಎನ್