ಮಡಿಕೇರಿ, ಸೆ. ೧೩: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಮರೆನಾಡು ಕೊಡವ ಸಮಾಜದ ವತಿಯಿಂದ ಇತ್ತೀಚೆಗೆ ಕೈಲ್ಪೊಳ್ದ್ ಆಚರಣೆ ನಡೆಯಿತು. ಬಾಡಗರಕೇರಿಯಲ್ಲಿರುವ ಸಮಾಜದ ಕಟ್ಟಡದಲ್ಲಿ ಆಯುಧಪೂಜೆಯೊಂದಿಗೆ ಆಡಳಿತ ಮಂಡಳಿ ಪ್ರಮುಖರು ಸರಳವಾಗಿ ಕಾರ್ಯಕ್ರಮ ಆಚರಿಸಿದರು. ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ (ಪೊನ್ನುಮಣಿ) ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.