ಶನಿವಾರಸಂತೆ, ಸೆ. ೧೨: ಸಮೀಪದ ಶಿವರಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಾವಯವ ಕೃಷಿ ಸಂಘ, ಕೃಷಿ ಇಲಾಖೆ ಹಾಗೂ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ ವತಿಯಿಂದ ಸಾವಯವ ಕೃಷಿ ಅಳವಡಿಕೆ ಮತ್ತು ಗುಂಪು ಪ್ರಮಾಣೀಕರಣ ಯೋಜನೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಷಯತಜ್ಞ ಗೋಣಿಕೊಪ್ಪದ ಕೆವಿಕೆಯ ಡಾ. ವೀರೇಂದ್ರಕುಮಾರ್ ಅವರು ಸಾವಯವದಲ್ಲಿ ಅಡಿಕೆ ಬೇಸಾಯ ಮತ್ತು ಕಾಳುಮೆಣಸು ನಿರ್ವಹಣೆ ಕುರಿತು ಮಾಹಿತಿ ನೀಡಿದರು. ವಿಜ್ಞಾನಿ ಡಾ. ಹರೀಶ್ ಸಾವಯವ ಕೃಷಿ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಬಗ್ಗೆ ಹಾಗೂ ಪ್ರಗತಿಪರ ಸಾವಯವ ಕೃಷಿಕ ರಾಜಶೇಖರ್ ಸಾವಯವ ಕೃಷಿ ಮತ್ತು ಔಷಧಿ ಸಸ್ಯಗಳ ಉಪಯೋಗ ಬಗ್ಗೆ ಮಾಹಿತಿ ನೀಡಿದರು.
ಐಪಿಎಸ್ ವ್ಯವಸ್ಥಾಪಕ ಕೆ. ಪುಟ್ಟುಸ್ವಾಮಿ ಪ್ರಾಸ್ತಾವಿಕ ನುಡಿ ಯಾಡಿದರು. ಬಸವೇಶ್ವರ ಸಂಘದ ಅಧ್ಯಕ್ಷ ಎಸ್.ಎಲ್. ಮೇದಪ್ಪ ಅಧ್ಯಕ್ಷತೆ ವಹಿಸಿದ್ದರು. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಾ, ಹನೀಫ್, ಬಿ.ಕೆ. ದಿನೇಶ್, ಕ್ಷೇತ್ರಾಧಿಕಾರಿ ಲೋಕೇಶ್, ಹೋಬಳಿ ಸಂಪರ್ಕ ಕೇಂದ್ರದ ಲೆಕ್ಕಾಧಿಕಾರಿ ಹರೀಶ್ ಉಪಸ್ಥಿತರಿದ್ದರು.