ಮಡಿಕೇರಿ ಸೆ.೧೨ : ಮೈಸೂರಿನಲ್ಲಿ ನಡೆದ ಕರ್ನಾಟಕ ‘ಓಪನ್ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯಪ್ ಶಿಪ್’ನಲ್ಲಿ ನಗರದ ನಾಟ್ಯ ಕಲಾ ನೃತ್ಯ ಶಾಲೆಯ ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದಿದ್ದಾರೆ. ಯಾನ, ಅದಿತಿ, ತೇಜಸ್, ಬೋಜಮ್ಮ, ಅಜ್ಜೆಟ್ಟಿರ ಕಾವೇರಮ್ಮ, ಆರ್ಯನ್, ಆರ್ಯ, ಗ್ರೀಷ್ಮ, ಶಿವಕುಮಾರ್ ಹಾಗೂ ಕೀರ್ತನ್ ಗುಂಪು ನೃತ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗಳಾಗಿದ್ದಾರೆ. ಏಕ ವ್ಯಕ್ತಿ ನೃತ್ಯ ವಿಭಾಗದಲ್ಲಿ ಯಾನ ಹಾಗೂ ಅದಿತಿ ಚಿನ್ನದ ಪದಕ ಮತ್ತು ತೇಜಸ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ರಾಷ್ಟç ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ನಾಟ್ಯ ಕಲಾ ನೃತ್ಯ ಶಾಲೆಯ ತರಬೇತುದಾರ ಅಭಿಷೇಕ್ ಅವರು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದ್ದಾರೆ.