ಮಡಿಕೇರಿ, ಸೆ. ೧೨: ಪಾಲಿಬೆಟ್ಟದ ಚೆನ್ನಂಗಿ ಗ್ರಾಮದ ಕಾವೇರಿ ಸೇವಾ ಸಂಘದ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಇದೇ ಗ್ರಾಮದ ದಿ. ವಾಟೇರಿರ ಪೊನ್ನಪ್ಪ (ನಾಣಿ) ಅವರ ಜ್ಞಾಪಕಾರ್ಥ ಅವರ ಪತ್ನಿ ಶಾರದ ಪೊನ್ನಪ್ಪ ಮತ್ತು ಮಕ್ಕಳಿಂದ ಪಾರಿತೋಷಕಗಳನ್ನು ನೀಡಲಾಯಿತು. ಸಂಘದ ಅಧ್ಯಕ್ಷ ಶ್ಯಾಮ್‌ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾಲು ಮತ್ತು ಸದಸ್ಯರು ಹಾಜರಿದ್ದರು.

ಸ್ಪರ್ಧೆಯಲ್ಲಿ ಕಾಡ್ಯಮಾಡ ಟಿ. ಸೋಮಣ್ಣ ಪ್ರಥಮ, ಕುಟ್ಟಂಡ ಮದನ್ ಮಾದಯ್ಯ ದ್ವಿತೀಯ, ಕಾಡ್ಯಮಾಡ ಭಾವನ ದೇಚಮ್ಮ ಸುಬ್ಬಯ್ಯ ತೃತೀಯ ಸ್ಥಾನ ಪಡೆದುಕೊಂಡರು.