ಮಡಿಕೇರಿ, ಸೆ. ೧೧: ಮೂಲತಃ ಮಡಿಕೇರಿಯವರಾದ ಮೈಸೂರಿನಲ್ಲಿ ನೆಲೆಸಿರುವ ಉಳುವಾರ ಆಶಿಕಾ ಅಪ್ಪಯ್ಯ ಅವರು ಸ್ನಾತ್ತಕೋತರ ಪದವಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕಮ್ಯುನಿಕೇಶನ್ ಆ್ಯಂಡ್ ಜರ್ನಲಿಸಮ್ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಪ್ರಸ್ತುತ ಮೈಸೂರಿನಲ್ಲಿಯೇ ನೆಲೆಸಿರುವ ಇವರು ದಿ. ಉಳುವಾರ ಮಾದಯ್ಯ ಅಪ್ಪಯ್ಯ ಹಾಗೂ ಅನುರಾಧ ಅಪ್ಪಯ್ಯ ದಂಪತಿಯ ಪುತ್ರಿ.