ಮಡಿಕೇರಿ, ಸೆ. ೧೨: ರೋಟರಿ ಸಂಸ್ಥೆಯು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗಾಗಿ ಉಚಿತವಾಗಿ ವಿತರಿಸಲು ಹೊರ ತಂದಿರುವ ಮಾರ್ಗ ದರ್ಶಿ ಪುಸ್ತಕಗಳನ್ನು ಮರ ಗೋಡಿನ ಭಾರತಿ ಪ್ರೌಢಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಟಿ ಮಂಜುನಾಥ್ ವಿತರಿಸಿದರು.
ಬಳಿಕ ಮಾತನಾಡಿದ ಅವರು ರೋಟರಿ ಸಂಸ್ಥೆಯು ಸಾಮಾಜಿಕ ಕಳಕಳಿ, ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ಕಾರ್ಯನಿರ್ವ ಹಿಸುತ್ತಿದೆ. ಶಿಕ್ಷಣವು ಆರ್ಥಿಕ ಸಬಲತೆ ಇಲ್ಲದವರನ್ನೂ ಸಬಲರನ್ನಾಗಿಸುತ್ತದೆ. ಎಲ್ಲಾ ಕಾಲದಲ್ಲೂ ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎಂದು ಭಾವಿಸುವುದು ತಪ್ಪು, ಅದು ಅನುತ್ಪಾದಕ ಕೆಲಸಗಳಿಗೂ ವೆಚ್ಚ ಮಾಡ ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಸಮಾಜದ ಏಳಿಗೆಯನ್ನು ಆಶಿಸಿ ಲವಲೇಶವೂ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಸಂಸ್ಥೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಮಡಿಕೇರಿಯ ಅಧ್ಯಕ್ಷ ಎನ್ ಡಿ ಅಚ್ಚಯ್ಯ ಮಾತ ನಾಡಿ, ದೇಶ ಕಟ್ಟಲಿರುವವರು ಮಕ್ಕಳು, ಒಬ್ಬೊ ಬ್ಬರು ಒಂದೊAದು ಕೊಡುಗೆ ನೀಡು ವಂತಾಗಬೇಕು, ನಾವು ನಮ್ಮ ಊರನ್ನು ಕಟ್ಟಿದರೆ ತನ್ನಿಂತಾನೆ ದೇಶ ವೂ ನಿರ್ಮಾಣ ಗೊಳ್ಳುತ್ತದೆ ಎಂದರು.
ರೋಟರಿ ಮಡಿಕೇರಿಯ ಕಾರ್ಯದರ್ಶಿ ಲಲಿತಾ ರಾಘವನ್ ಮಾತನಾಡಿ ವಿದ್ಯಾಸೇತು ಕೈಪಿಡಿಯಲ್ಲಿ ೮,೯,೧೦ ನೇ ತರಗತಿಯ ಗಣಿತ,ವಿಜ್ಞಾನ,ಆಂಗ್ಲಭಾಷಾ ಪಠ್ಯದ ಸಾರಾಂಶವಿದೆ.ರಾಜ್ಯದ ೫.೫೦ ಲಕ್ಷ ವಿದ್ಯಾರ್ಥಿಗಳಿಗೆ ಈ ಕೈಪಿಡಿಯನ್ನು ವಿತರಿಸಲಾಗುತ್ತದೆ ಎಂದು ಹೇಳಿದರು. ಸದಸ್ಯರಾದ ಮಲ್ಲಿಗೆ ಪೈ, ಮಂದಣ್ಣ, ಮೃಣಾಲಿನಿ, ಭಾರತಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಸುರೇಶ್ ನಾಯ್ಕ್, ಪ್ರೌಢಶಾಲಾ ಮುಖ್ಯ ಶಿಕ್ಷÀಕ ಪಿ.ಎಸ್. ರವಿಕೃಷ್ಣ, ಮಡಿಕೇರಿ ಶಿಕ್ಷಣ ಸಂಯೋಜಕ ಹರೀಶ್, ಶಿಕ್ಷಕಿ ಪೂರ್ಣಿಮ ಬಿ ಬಿ ಉಪಸ್ಥಿತರಿದ್ದರು.