ಮಡಿಕೇರಿ, ಸೆ.೧೨: ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ತಾ.೧೪ ರಂದು ಮಂಗಳವಾರ ಸಂಜೆ ೭ ಗಂಟೆಗೆ ನಗರದ ರೋಟರಿ ಹಾಲ್ ನಲ್ಲಿ ರೋಟರಿ ನೇಷನ್ ಬಿಲ್ಡಿಂಗ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕೂಡಿಗೆ ಕ್ರೀಡಾಶಾಲೆಗೆ ೩೦ ವರ್ಷ ಪ್ರಾಂಶುಪಾಲರಾಗಿದ್ದ ಕುಂತಿಬೋಪಯ್ಯ ಈ ಸಂದರ್ಭ ರೋಟರಿಯಿಂದ ಪ್ರಶಸ್ತಿ ವಿಜೇತ ಶಿಕ್ಷಕ, ಶಿಕ್ಷಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮಡಿಕೇರಿ ನಗರಸಭೆಯ ಶಾಲಾ ಶಿಕ್ಷಕಿಯರಾದ ಪ್ರಫುಲ್ಲ ದೇವರಾಜ್, ಸರೋಜಿನಿ, ರೋಜಿ, ಕಡಗದಾಳು ಶಾಲಾ ಶಿಕ್ಷಕಿ ಅನಿತಾಚೋಕಿರ, ಪೆರಾಜೆಯ ನಿವೃತ್ತ ಶಿಕ್ಷಕ ಲಗೋರಿ ಕ್ರೀಡೆಯನ್ನು ರಾಜ್ಯವ್ಯಾಪಿ ಪ್ರೋತ್ಸಾಹಿಸಿದ ದೊಡ್ಡಣ್ಣ ಬರಮೇಲು ಅವರನ್ನು ಈ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ವಲಯ ಕಾರ್ಯದರ್ಶಿ ಎಚ್.ಎಸ್.ವಸಂತ್ ಕುಮಾರ್, ವಲಯ ಸೇನಾನಿ ಜಗದೀಶ್ ಪ್ರಶಾಂತ್ , ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್.ರಾಜೇಶ್ ಪಾಲ್ಗೊಳ್ಳಲಿದ್ದಾರೆ. ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.