ಕೂಡಿಗೆ ವಿವಿಧೆಡೆ ಆಚರಣೆ

ಕೂಡಿಗೆ, ಸೆ. ೧೨: ಕೂಡಿಗೆ ಕೂಡುಮಂಗಳೂರು ಸೇರಿದಂತೆ ವಿವಿಧೆಡೆ ವಿವಿಧ ಸಂಘ ಸಂಸ್ಥೆಯವರು ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಿದರು. ಕೂಡಿಗೆ ಶ್ರೀ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಕೂಡಿಗೆ ಸರ್ಕಲ್ ಸಮೀಪದಲ್ಲಿರುವ ಪೆಂಡಾಲ್‌ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಿ, ನಂತರ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಿದರು.

ಕೂಡಿಗೆ ಡೈರಿ ಸಭಾಂಗಣದಲ್ಲಿ ಡೈರಿ ಕಾರ್ಮಿಕರ ಸಂಘಟನೆಯ ವತಿಯಿಂದ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗುತ್ತಿದೆ. ಕೂಡುಮಂಗಳೂರು ಸಂಗಮ ಯುವಕ ಸಂಘದ ವತಿಯಿಂದ ವರ್ಷಂಪ್ರತಿಯAತೆ ಈ ಬಾರಿಯು ಗ್ರಾಮದ ಸಮುದಾಯ ಭವನದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಗ್ರಾಮಸ್ಥರ ಸಹಕಾರದೊಂದಿಗೆ ಗಣೇಶೋತ್ಸವನ್ನು ಆಚರಿಸಲಾಗುತ್ತಿದೆ.

ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಊರಿನವರ ಸಮ್ಮುಖದಲ್ಲಿ ಗಣಪತಿ ಹೋಮ ವನ್ನು ನೆರವೇರಿಸಲಾಯಿತು. ಪ್ರಸಾದ ವಿತರಣೆ ನೆರವೇರಿತು.

ಚೆಟ್ಟಳ್ಳಿ: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಊರಿನವರ ಸಮ್ಮುಖದಲ್ಲಿ ಗಣಪತಿ ಹೋಮ ವನ್ನು ನೆರವೇರಿಸಲಾಯಿತು. ಪ್ರಸಾದ ವಿತರಣೆ ನೆರವೇರಿತು.

ಬೇಟೋಳಿ ರಾಮನಗರ ಪುದುಪಾಡಿ ಅಯ್ಯಪ್ಪ

ವೀರಾಜಪೇಟೆ: ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರ ದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗಣೇಶೋತ್ಸ ವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಇಲ್ಲಿನ ಶ್ರೀ ಗಣಪತಿ ದೇಗುಲದಲ್ಲಿ ಬೆಳಿಗ್ಗೆ ಯಿಂದಲೇ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಗಣಪತಿ ಹೋಮ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣಪತಿ ಪೂಜೆ ಜರುಗಿತು. ಈ ಸಂದರ್ಭದಲ್ಲಿ ಗ್ರಾಮದ ಚಿತ್ರ ಕಲಾವಿದ ಸುನಾದ್ ಭಾರದ್ವಾಜ್ ರಚಿಸಿದ ದೇವಸ್ಥಾನದ ಲಾಂಛನವನ್ನು ಮಾತೃಶ್ರೀ ಸುಧಾ ಅನಾವರಣಗೊಳಿಸಿದರು.

ಮಹಾ ಮಂಗಳಾರತಿಯ ಬಳಿಕ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಜರುಗಿತು. ನಂತರ ಹೂವಿನ ಅಲಂಕೃತ ಮಂಟಪದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಬೇಟೋಳಿ ಹೊಳೆಯಲ್ಲಿ ವಿಸರ್ಜಿಸಲಾಯಿತು. ಗ್ರಾಮಸ್ಥರು, ದೇವಸ್ಥಾನದ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.

ಸುAಟಿಕೊಪ್ಪ: ವಿಶ್ವ ಹಿಂದೂ ಪರಿಷದ್ ಮತ್ತು ಗೌರಿಗಣೇಶೋತ್ಸವ ಸಮಿತಿಯ ವತಿಯಿಂದ ೫೭ನೇ ವರ್ಷದ ಗೌರಿಗಣೇಶೋತ್ಸವದ ಅಂಗವಾಗಿ ಕೋದಂಡರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯನ್ನು ಸರಳವಾಗಿ ವಿಸರ್ಜಿಸಲಾಯಿತು.

ಗೌರಿಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನಿಗೆ ೩ ದಿನಗಳ ಕಾಲ ವಿಶೇಷ ಪೂಜೆ, ಹೋಮ ಹವನ ಮಾಡುವ ಮೂಲಕ ಕೋದಂಡರಾಮ ಮಂದಿರದಲ್ಲಿ ಪೂಜಿಸಲಾಯಿತು. ಬಾನುವಾರ ವiದ್ಯಾಹ್ನದ ನಂತರ ೨.೩೦ ಗಂಟೆಗೆ ಹೂವಿನ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸರಳವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ನಂತರ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೆ ತೆರಳಿ ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳುವ ಸಂದರ್ಭ ಭಕ್ತರು ಈಡುಗಾಯಿ ಹೊಡೆದು ಹಣ್ಣುಕಾಯಿ ನೀಡುವುದರೊಂದಿಗೆ ಪೂಜೆ ಸಲ್ಲಿಸಿದರು.

ನÀಂತರ ಗದ್ದೆಹಳ್ಳದ ವೈ.ಯಂ.ಉಲ್ಲಾಸ್ ಮತ್ತು ವೈ.ಎಂ.ಕರುAಬಯ್ಯ ಅವರ ಕೆರೆಯಲ್ಲಿ ಸಂಜೆ ವಿಸರ್ಜಿಸಲಾಯಿತು. ಅರ್ಚಕರಾದ ದರ್ಶನ್ ಭಟ್, ಮನೋಜ್ ಭಟ್ ಮತ್ತು ನಿಕಿತ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಈ ಸಂದರ್ಭ ಶ್ರೀ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್À (ಪುಟ್ಟ), ಪಿ. ಲೋಕೇಶ್, ಎಂ.ಆರ್. ಶಶಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಗೋಪಿ ಬಿ.ಕೆ. ಪ್ರಶಾಂತ್, ಟಿ.ಕೆ.ರಾಕೇಶ್, ಶಾಂತ ರಾಮ್ ಕಾಮತ್, ಪಿ.ಆರ್. ಸುನೀಲ್ ಕುಮಾರ್, ಸದಾಶಿವ ರೈ, ಗುಣಶೇಖರ್ , ಎಂ.ಎಸ್. ಸುನಿಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು. ಸುಂಟಿಕೊಪ್ಪ : ಇಲ್ಲಿನ ನಾರ್ಗಣೆ ಗ್ರಾಮದ ಶ್ರೀ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಗಿರಿಯಪ್ಪ ಮನೆ ಸಮೀಪವಿರುವ ಸಾರ್ವಜನಿಕ ಬಾವಿಯಿಂದ ಗಂಗಾಜಲದ ಮೂಲಕ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲಾಯಿತು.

ನಂತರ ಗಣಹೋಮದೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಮಹಾಮಂಗಳಾರತಿಯೊAದಿಗೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ಸರಕಾರದ ನಿಯಮಾನುಸಾರವಾಗಿ ಗಿರಿಯಪ್ಪ ಮನೆ ಸಮೀಪದಲ್ಲಿರುವ ಸಾರ್ವಜನಿಕ ಬಾವಿಯಲ್ಲಿ ವಿಸರ್ಜಿಸಲಾಯಿತು. ಸಮಿತಿ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ವಿನು, ಕಾರ್ಯದರ್ಶಿ ಶಿವಪ್ರಸಾದ್ ರೈ, ಸಹಕಾರ್ಯದರ್ಶಿ ವಿನಿತ್ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.

ಬಾಡಗ ಬಾಣಂಗಾಲ

ಸಿದ್ದಾಪುರ: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬಾಡಗಬಾಣಂಗಾಲ ಗ್ರಾಮದ ಮೈಲಾಪುರ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಪ್ಪಾಜಿ ದೇವಾಲಯದಲ್ಲಿ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಗಣೇಶ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಿದ್ಧಪ್ಪಾಜಿ ದೇವಾಲಯದ ಪ್ರಮುಖರಾದ ಬಾಲು ಪೂಜಾರಿ ಹಾಗೂ ಗಣೇಶ ಇನ್ನಿತರರು ಹಾಜರಿದ್ದರು.

ಬಾಡಗ ಬಾಣಂಗಾಲ

ಸಿದ್ದಾಪುರ: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬಾಡಗಬಾಣಂಗಾಲ ಗ್ರಾಮದ ಮೈಲಾಪುರ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಪ್ಪಾಜಿ ದೇವಾಲಯದಲ್ಲಿ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಗಣೇಶ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಿದ್ಧಪ್ಪಾಜಿ ದೇವಾಲಯದ ಪ್ರಮುಖರಾದ ಬಾಲು ಪೂಜಾರಿ ಹಾಗೂ ಗಣೇಶ ಇನ್ನಿತರರು ಹಾಜರಿದ್ದರು.

ಬಾಡಗ ಬಾಣಂಗಾಲ

ಸಿದ್ದಾಪುರ: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಬಾಡಗಬಾಣಂಗಾಲ ಗ್ರಾಮದ ಮೈಲಾಪುರ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಪ್ಪಾಜಿ ದೇವಾಲಯದಲ್ಲಿ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಗಣೇಶ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಿದ್ಧಪ್ಪಾಜಿ ದೇವಾಲಯದ ಪ್ರಮುಖರಾದ ಬಾಲು ಪೂಜಾರಿ ಹಾಗೂ ಗಣೇಶ ಇನ್ನಿತರರು ಹಾಜರಿದ್ದರು.

ಕೂಡುಮಂಗಳೂರು

ಕೂಡಿಗೆ: ಕೂಡಿಗೆ ಕೂಡುಮಂಗಳೂರು ವ್ಯಾಪ್ತಿಯಲ್ಲಿ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಅರಿಶಿನ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಿದರು.ಕಣಿವೆ, ಸೆ. ೧೨ : ಗಣಪತಿ ವಿಸರ್ಜನೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧಿಕಾರಿ ವರ್ಗದ ವಿರುದ್ಧ ಪಂಚಾಯ್ತಿ ಸದಸ್ಯ ಸೇರಿದಂತೆ ಭಕ್ತಾದಿಗಳು ಧಿಕ್ಕಾರ ಕೂಗಿದ ಘಟನೆ ನಡೆದಿದೆ.

ಸಣ್ಣಗುಂಡಿಯಲ್ಲಿ ಗಣಪತಿ ವಿಸರ್ಜನೆಗೆ ಅನಾನುಕೂಲ ಉಂಟಾದ ಕಾರಣ ಪಂಚಾಯ್ತಿ ಸದಸ್ಯ ಬಿ.ಎಲ್.ಜಗದೀಶ್ ಮತ್ತು ಭಕ್ತಾದಿಗಳು ಪಂಚಾಯ್ತಿ ಅಧಿಕಾರಿ ವರ್ಗ ಮತ್ತು ಸರಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪಪಂ ಸದಸ್ಯ ಬಿ.ಎಲ್.ಜಗದೀಶ್, ಗಣಪತಿ ವಿಸರ್ಜನೆಗೆಂದು ಪಪಂ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ತಾತ್ಕಾಲಿಕ ಗುಂಡಿ ನಿರ್ಮಿಸಿದೆ. ಕೇವಲ ೩ ಅಡಿ ಆಳದ ಗುಂಡಿಯಲ್ಲಿ ಈಗಾಗಲೇ ಪಟ್ಟಣ ವ್ಯಾಪ್ತಿಯ ೨೦ ಕ್ಕೂ ಅಧಿಕ ಗಣಪತಿ ವಿಸರ್ಜಿಸಲಾಗಿದೆ. ಗಣಪತಿ ವಿಸರ್ಜನೆಗೆ ಗುಂಡಿಗೆ ಇಳಿದರೆ ಕೆಳಗಿರುವ ಗಣಪತಿ ಮೂರ್ತಿಗಳನ್ನು ತುಳಿಯಬೇಕಾದ ಸ್ಥಿತಿ ಉಂಟಾಗಿದೆ. ಅಲ್ಲದೆ ಈ ಗುಂಡಿ ಸಂಪೂರ್ಣ ಕೆಸರುಮಯವಾಗಿದೆ ಎಂದು ಆರೋಪಿಸಿದರು. ಸದಸ್ಯರ ಗಮನಕ್ಕೆ ತರದೆ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಈ ವ್ಯವಸ್ಥೆ ರೂಪಿಸಿರುವುದು ಖಂಡನೀಯ ಎಂದರು. ಕಾವೇರಿ ನದಿಯಲ್ಲಿ ಗಣಪತಿ ವಿಸರ್ಜಿಸುತ್ತಾ ಬರುತ್ತಿರುವ ವ್ಯವಸ್ಥೆಗೆ ಕಡಿವಾಣ ಹಾಕಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಂಡಿನಪೇಟೆಯ ವಿಜಯ ವಿನಾಯಕ ಸೇವಾ ಸಮಿತಿಯ ಎಚ್.ಎಂ. ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭ ವಿವಿಧ ಸೇವಾ ಸಮಿತಿ ಭಕ್ತಾದಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಅರಿಶಿಣ ಗಣೇಶ

ಸುಂಟಿಕೊಪ್ಪ: ಸುಂಟಿಕೊಪ್ಪ ಮಧುರಮ್ಮ ಬಡಾವಣೆ ನಿವಾಸಿ ಮಡುವಂಡ ಧನು ಕಾವೇರಪ್ಪ ಅವರ ಮಕ್ಕಳಾದ ಅಶ್ವಿನ್ ಪೂವಯ್ಯ ಹಾಗೂ ಜನನ್ ಮಾಚಯ್ಯ ಶ್ರೀ ಗೌರಿ ಗಣೇಶ ಉತ್ಸವದ ಅಂಗವಾಗಿ ಪರಿಸರ ಪ್ರೇಮಿ ಮನೆಯಲ್ಲಿ ಅರಶಿನ ಶ್ರೀ ಗಣೇಶನ ಮೂರ್ತಿಯನ್ನು ತಯಾರಿಸಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸಿ ವಿಸರ್ಜಿಸಿದರು.