ಪೆರಾಜೆ, ಸೆ. ೧೨: ಚಿಗುರು ಯುವಕಮಂಡಲದ ೨೦೨೧-೨೨ನೇ ಸಾಲಿನ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ವೈನಾಟ್ ಕುಲವನ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕಿರಣ್ ಕುಂಬಳಚೇರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಅರುಣ ಮಜಿಕೋಡಿ, ಉಪಾಧ್ಯಕ್ಷರಾಗಿ ಕಿರ್ತನ್ ಮಜಿಕೋಡಿ, ಕಾರ್ಯದರ್ಶಿಯಾಗಿ ಭವಿತ್ ಕುಂಬಳಚೇರಿ, ಖಜಾಂಚಿಯಾಗಿ ಪವನ್ ಕುಂಬಳಚೇರಿ, ಕ್ರೀಡಾ ಸಮಿತಿ ಅಧ್ಯಕ್ಷರಾಗಿ ನಿತಿನ್ ಮಜಿಕೋಡಿ, ಕಾರ್ಯದರ್ಶಿಯಾಗಿ ತಾರೇಶ್ ಕುಂಬಳಚೇರಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಮಿಥುನ್ ಮಜಿಕೋಡಿ, ಕಾರ್ಯದರ್ಶಿಯಾಗಿ ಚರಣ್‌ರಾಜ್ ಕುಂಬಳಚೇರಿ ಹಾಗೂ ನಿರ್ದೇಶಕರುಗಳಾಗಿ ತೀರ್ಥೇಶ್ ಕುಂದಲ್ಪಾಡಿ, ಜಗದೀಶ್ ಕುಂಬಳಚೇರಿ, ಹೇಮಕುಮಾರ್, ಪ್ರಮೋದ್, ಜೀವನ್, ಪ್ರಣೀತ್, ಆಯ್ಕೆಯಾದರು.
ಕಾರ್ಯಕ್ರಮದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ದಿವಾಕರ ಮಜಿಕೋಡಿ ಹಾಗೂ ಲೆಕ್ಕಪತ್ರವನ್ನು ಖಜಾಂಚಿ ಯತಿಶ್ಯಾಂ ಮಂಡಿಸಿದರು. ಜಗದೀಶ್ ಪ್ರಾರ್ಥಿಸಿ, ಶೀತಲ್ ಕುಂಬಳಚೇರಿ ಸ್ವಾಗತಿಸಿ, ನಿಧಿ ಹೊದ್ದೆಟ್ಟಿ ವಂದಿಸಿದರು.