ಮಡಿಕೇರಿ: ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕೋವಿಡ್ ಕಾರಣದಿಂದ ಯುಟ್ಯೂಬ್‌ನಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡ ಲಾಯಿತು.
ವಿದ್ಯಾರ್ಥಿ ಗಳಿಂದ ಸ್ವಾಗತ ನೃತ್ಯ, ಮಕ್ಕಳು ವಿವಿಧ ಶಿಕ್ಷಕರ ಛದ್ಮವೇಷವನ್ನು ಧರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಲ್ಲದೆ ಶಾಲಾ ಮಕ್ಕಳಿಂದ ಶಿಕ್ಷಕರ ಕಿರು ಪರಿಚಯ ಕಾರ್ಯಕ್ರಮದ ರಂಗು ಹೆಚ್ಚಿಸಿತು.
ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಪ್ರಾಂಶುಪಾಲ ಡಾ. ಬೆನ್ನಿ ಕೊರಿಯೋಕೋಸ್ ಮಾತನಾಡಿ, ಸೆಪ್ಟೆಂಬರ್ ೫ ಒಂದು ವಿಶೇಷ ದಿನ. ದ್ವಿತೀಯ ರಾಷ್ಟçಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಹಾನ್ ಚೇತನರಾಗಿದ್ದು. ಮಹಾ ಮೇದಾವಿ ಶಿಕ್ಷಣ ಕ್ಷೇತ್ರದಲ್ಲಿ ಅವರ ಗಣನೀಯ ಕೊಡುಗೆಯನ್ನು ಅವರ ಜನುಮ ದಿನದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆಯ ಮೂಲಕ ಆಚರಿಸಲಾಗುತ್ತದೆ ಎಂದರು.