ಸೋಮವಾರಪೇಟೆ, ಸೆ. ೧೨: ಗೌರಿ ಹಬ್ಬ ಕಳೆದರೂ ಮಳೆ ಕಡಿಮೆಯಾಗದೇ ಇರುವುದರಿಂದ ಅರೇಬಿಕಾ ಕಾಫಿ ಫಸಲು ನೆಲಕ್ಕಚ್ಚು ತ್ತಿದ್ದು, ಶೀತಮಯ ವಾತಾವರಣ ದಿಂದಾಗಿ ಕರಿಮೆಣಸು, ಏಲಕ್ಕಿಯೂ ಸಹ ಈ ಬಾರಿ ಬೆಳೆಗಾರರ ಕೈಬಿಡುವ ಲಕ್ಷಣ ಕಂಡುಬರುತ್ತಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ಗಿಡಗಳಿಗೆ ಕೊಳೆರೋಗ ತಗುಲಿದ್ದು, ಫಸಲು ಹಿಡಿದಿದ್ದ ಗಿಡಗಳು ಇದೀಗ ಬೋಳಾಗುತ್ತಿವೆ. ಈ ವರ್ಷವಾದರೂ ಬಂಪರ್ ಫಸಲು ಲಭಿಸುವ ನಿರೀಕ್ಷೆಯಲ್ಲಿದ್ದ ಬೆಳೆಗಾರರ ಗೋಳು ಮತ್ತೆ ಮುಂದುವರೆದಿದ್ದು, ನಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯಲ್ಲಿ ಪ್ರಾರಂಭದಲ್ಲಿ ಉತ್ತಮವಾಗಿ ಹೂ ಮಳೆಯಾಗಿದ್ದರಿಂದ ಅರೇಬಿಕಾ ಕಾಫಿ ಗಿಡಗಳಲ್ಲಿ ಹೆಚ್ಚಿನ ಫಸಲು ಕಂಡುಬAದಿದ್ದವು. ಕಳೆದೆರಡು ವರ್ಷ ಗಳಿಂದ ನಿರಂತರವಾಗಿ ಅತಿವೃಷ್ಟಿಗೆ ತುತ್ತಾಗಿ ಫಸಲು ನಷ್ಟ ಅನುಭವಿಸಿದ್ದ ಬೆಳೆಗಾರರ ಮೊಗದಲ್ಲಿ ಹೂ ಮಳೆ ಹರ್ಷತಂದಿತ್ತು.
ತದನAತರವೂ ಹಂತಹAತ ವಾಗಿ ಮಳೆಯಾದ ಹಿನ್ನೆಲೆ ಅರೇಬಿಕಾ ಗಿಡಗಳಲ್ಲಿ ಬಂಪರ್ ಫಸಲು ಬಂದಿತ್ತು. ಕಳೆದೆರಡು ವರ್ಷ ಗಳ ನಷ್ಟವನ್ನು ಸರಿದೂಗಿಸಿಕೊಳ್ಳುವ ಆಲೋಚನೆಯಲ್ಲಿದ್ದ ಬೆಳೆಗಾರರಿಗೆ ಈ ವರ್ಷದ ಅತೀವೃಷ್ಟಿ ಆಘಾತ ತಂದಿದ್ದು,
(ಮೊದಲ ಪುಟದಿಂದ) ಮತ್ತೆ ನಷ್ಟದ ಕೂಪಕ್ಕೆ ತಳ್ಳಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿಗೆ ಕೊಳೆರೋಗ ತಗುಲಿದ್ದು, ಗಿಡಗಳ ಎಲೆಗಳು ಕರಗುತ್ತಿವೆ. ಇದರೊಂದಿಗೆ ಬಲಿಯುವ ಹಂತದಲ್ಲಿರುವ ಕಾಫಿ ಫಸಲು ನೆಲಕ್ಕಚ್ಚುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಕೆಲವು ಕಡೆಗಳಲ್ಲಿ ಈಗಾಗಲೇ ಕಾಫಿ ಹಣ್ಣಾಗುತ್ತಿದ್ದು, ಕೊಯ್ಲು ಮಾಡಲು ಅಸಾಧ್ಯವಾಗಿದೆ.
ತಾಲೂಕಿನ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಳೆರೋಗ ಕಂಡುಬAದಿದೆ. ಫಸಲು ಹಿಡಿದಿದ್ದ ರೆಕ್ಕೆಗಳು ಬೋಳಾಗುತ್ತಿದ್ದು, ಎಲೆಗಳೂ ಸಹ ಕರಗುತ್ತಿವೆ. ಶಾಂತಳ್ಳಿ, ಕುಮಾರಳ್ಳಿ, ಕುಂದಳ್ಳಿ, ತೋಳೂರುಶೆಟ್ಟಳ್ಳಿ, ಗರ್ವಾಲೆ, ಕಿಕ್ಕರಳ್ಳಿ, ಹರಗ, ಬೆಟ್ಟದಕೊಪ್ಪ, ಚಾಮೇರಮನೆ, ಸೂರ್ಲಬ್ಬಿ, ಮಲ್ಲಳ್ಳಿ, ತಡ್ಡಿಕೊಪ್ಪ, ಹಂಚಿನಳ್ಳಿ, ಕೊತ್ನಳ್ಳಿ, ಕುಡಿಗಾಣ, ಹೆಗ್ಗಡಮನೆ, ಪುಷ್ಪಗಿರಿ, ಕೂತಿ, ಎಡದಂಟೆ ವ್ಯಾಪ್ತಿಯಲ್ಲಿ ಕೊಳೆರೋಗಕ್ಕೆ ಹೆಚ್ಚಿನ ಫಸಲು ನೆಲಕ್ಕಚ್ಚಿವೆ.
ಭಾರೀ ಮಳೆ-ಗಾಳಿಗೆ ತೋಟದಲ್ಲಿ ಶೀತ ಹೆಚ್ಚಾಗಿ ಇತರ ಮರಗಳ ಎಲೆಗಳು ಅರೇಬಿಕಾ ಕಾಫಿ ಗಿಡಗಳ ಮೇಲೆ ಬಿದ್ದು, ಕೊಳೆಯಲಾರಂಭಿಸುತ್ತಿವೆ. ಇಲ್ಲಿಂದ ಶುರುವಾಗುವ ಕೊಳೆರೋಗ ಅರೇಬಿಕಾ ಕಾಫಿ ಗಿಡದ ಎಲೆ, ಫಸಲನ್ನು ಆಪೋಶನಗೈಯುತ್ತಿದ್ದು, ಫಸಲನ್ನು ಮಣ್ಣುಪಾಲು ಮಾಡುತ್ತಿದೆ.
ಕೊಳೆರೋಗ ನಿಯಂತ್ರಣಕ್ಕೆ ಬೆಳೆಗಾರರು ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸು ಲಭಿಸುತ್ತಿಲ್ಲ. ಕಾಫಿ ತೋಟಗಳ ವಾರ್ಷಿಕ ನಿರ್ವಹಣೆಯೂ ದುಬಾರಿಯಾಗುತ್ತಿವೆ. ಕೂಲಿಯೂ ಹೆಚ್ಚಾಗುತ್ತಿದ್ದು, ತೋಟಗಳನ್ನು ನಿರ್ವಹಣೆ ಮಾಡುವದೇ ಕಷ್ಟಸಾಧ್ಯ ಎಂಬAತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಡಿಗಾಣ ಗ್ರಾಮದ ಕೃಷಿಕ ಸುಧಿನ್ ಅಭಿಪ್ರಾಯಿಸಿದ್ದಾರೆ.
ಅರೇಬಿಕಾ ಕಾಫಿ ತೋಟದಲ್ಲಿ ವರ್ಷವಿಡೀ ಕೆಲಸ ನಿರ್ವಹಿಸಬೇಕಿದೆ. ಗಿಡಗಳ ಬುಡ ಬಿಡಿಸುವದು, ಗೊಬ್ಬರ ಹಾಕುವದು, ನೆರಳು ನಿರ್ವಹಣೆ, ಕೀಟನಾಶಕ ಸಿಂಪಡಣೆ, ಗಿಡಗಂಟಿಗಳ ತೆರವು, ಚರಂಡಿ ನಿರ್ಮಾಣ, ಬೇಸಿಗೆಯಲ್ಲಿ ನೀರು ಹಾಯಿಸುವದು.., ಹೀಗೆ ವರ್ಷವಿಡೀ ಕೆಲಸ ಮಾಡಿದರೂ ನಿರೀಕ್ಷಿತ ಆದಾಯ ಬರುತ್ತಿಲ್ಲ. ಸಣ್ಣ ಹಾಗೂ ಮಧ್ಯಮ ಬೆಳೆಗಾರರ ಸ್ಥಿತಿ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಮುದ್ದಪ್ಪ ಹೇಳಿದ್ದಾರೆ.
ಪ್ರತಿವರ್ಷ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಈ ವರ್ಷವೂ ನಷ್ಟಕ್ಕೆ ಸಿಲುಕಬೇಕಿದ್ದು, ಸರ್ಕಾರದ ಪರಿಹಾರಕ್ಕೆ ಕೈಯೊಡ್ಡಬೇಕಾಗಿದೆ. ಈಗಾಗಲೇ ತಾಲೂಕು ಕಂದಾಯ ಇಲಾಖೆಗೆ ಸಾವಿರಾರು ಅರ್ಜಿಗಳನ್ನು ಪರಿಹಾರಕ್ಕೆ ಸಲ್ಲಿಸಲಾಗಿದ್ದು, ಆ್ಯಪ್ ಮೂಲಕ ಬೆಳೆ ಸಮೀಕ್ಷೆಯೂ ನಡೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಬೆಳೆಗಾರರೂ ಫಸಲು ನಷ್ಟಕ್ಕೆ ಒಳಗಾಗಿದ್ದು, ಸರ್ಕಾರದಿಂದ ಗರಿಷ್ಠ ಮಟ್ಟದ ಪರಿಹಾರ ಒದಗಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕೆAದು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಒತ್ತಾಯಿಸಿದ್ದಾರೆ.
ಮಳೆ ಸುರಿಯುತ್ತಿರುವದರಿಂದ ಕೊಳೆರೋಗ ವ್ಯಾಪಕವಾಗಿ ಹರಡುವ ಸಂಭವವಿದ್ದು, ನೆರಳು ಹೆಚ್ಚಾಗಿರುವ ತೋಟಗಳಲ್ಲಿ ಮರಗಳ ಜೋಲು ರೆಕ್ಕೆಗಳನ್ನು ತೆಗೆದು, ಗಾಳಿ, ಬೆಳಕು ಹರಡುವಂತೆ ಮಾಡಬೇಕು. ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಗಿಡಗಳ ಸುತ್ತಲಿನ ತರಗು ಹೊದಿಕೆಯನ್ನು ತೆಗೆಯಬೇಕು. ಕಾಫಿ ಗಿಡಗಳ ಮೇಲೆ ಸಿಲ್ವರ್ ಮರದ ಎಲೆಗಳು ಸಂಗ್ರಹವಾಗದAತೆ ಎಚ್ಚರ ವಹಿಸಬೇಕು ಎಂದು ಕಾಫಿ ಮಂಡಳಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸೋಮವಾರಪೇಟೆಯಲ್ಲಿ ೬,೯೦೦ ಹೆಕ್ಟೇರ್‌ನಲ್ಲಿ ಅರೇಬಿಕಾ, ೪೦೦ ಹೆ.ನಲ್ಲಿ ರೋಬಸ್ಟಾ ಸೇರಿದಂತೆ ೭,೩೦೦ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಶನಿವಾರಸಂತೆಯಲ್ಲಿ ೬,೭೪೦ಹೆ. ನಲ್ಲಿ ಅರೇಬಿಕಾ, ೨೭೦ಹೆ.ನಲ್ಲಿ ರೋಬಸ್ಟಾ ಸೇರಿದಂತೆ ೭,೦೧೦ ಹೆ. ಕಾಫಿ ಬೆಳೆಯಲಾಗಿದೆ.
ಸುಂಟಿಕೊಪ್ಪದಲ್ಲಿ ೬,೬೬೦ಹೆ.ನಲ್ಲಿ ಅರೇಬಿಕಾ ಮತ್ತು ೩,೮೨೦ಹೆ. ರೋಬಸ್ಟಾ ಸೇರಿದಂತೆ ಒಟ್ಟು ೧೦,೪೮೦ ಹೆ., ಮಾದಾಪುರದಲ್ಲಿ ೨,೬೦೦ಹೆ. ಅರೇಬಿಕಾ ಮತ್ತು ೧೨೦೦ಹೆ. ರೋಬಸ್ಟಾ, ಸೇರಿದಂತೆ ೩,೮೦೦ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಉಳಿದ ಭಾಗಗಳಲ್ಲೂ ಅಲ್ಲಲ್ಲಿ ರೋಗಬಾಧೆ ಕಾಣಿಸಿಕೊಂಡಿದ್ದು, ರೋಗ ಹತೋಟಿಗೆ ಪ್ರಯತ್ನ ಮುಂದುವರಿದಿದೆ. ಸಾಮೂಹಿಕ ಹತೋಟಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೆಳೆಗಾರರು ನಷ್ಟದಿಂದ ಪಾರಾಗಬೇಕೆಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಪ್ರತಿಕೂಲ ಹವಾಮಾನದಿಂದಾಗಿ ಅರೇಬಿಕಾ ಕಾಫಿಯನ್ನು ಉಳಿಸಿಕೊಳ್ಳಲು ಬೆಳೆಗಾರರು ಹರಸಾಹಸ ಪಡುವಂತಾಗಿದೆ. ಒಂದೆಡೆ ಬೋರರ್ ಕೀಟ ಪೀಡಿತ ಗಿಡಗಳನ್ನು ತೆಗೆಯುವುದು, ಕೊಳೆರೋಗದಿಂದ ಗಿಡಗಳನ್ನು ಪಾರು ಮಾಡುವುದು, ಕಾಫಿ ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಂಡರೂ ಅತಿ ಮಳೆಯಿಂದಾಗಿ ವಾತಾವರಣದಲ್ಲಿ ಶೀತ ಹೆಚ್ಚಾಗಿರುವುದರಿಂದ ಕಾಫಿ ಫಸಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
-ವಿಜಯ್ ಹಾನಗಲ್