ಗುಡ್ಡೆಹೊಸೂರು, ಸೆ. ೧೧: ಇಲ್ಲಿಗೆ ಸಮೀಪದ ದೊಡ್ಡ ಬೆಟ್ಟಗೇರಿಯ ಸಮುದಾಯ ಭವನದಲ್ಲಿ ಸಾರ್ವಜನಿಕರ ಪೊಲೀಸ್ ಬೀಟ್ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ೧೧೨ ಸಹಾಯವಾಣಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಹಾಜರಿದ್ದ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಸ್ವಾಮಿ ಅವರು ಸಾರ್ವಜನಿಕರಿಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಕೊರೊನಾ ಮೂರನೆ ಅಲೆಯನ್ನು ತಪ್ಪಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿದರು. ದ್ವಿಚಕ್ರ ವಾಹನ ಸವಾರರು ತಮ್ಮ ಜೀವರಕ್ಷಣೆಗೆ ಹೆಲ್ಮೆಟ್ ಧರಿಸುವಂತೆ ಮತ್ತು ವಾಹನಗಳ ದಾಖಲಾತಿಗಳನ್ನು ವಾಹನಗಳಲ್ಲಿ ಇಟ್ಟುಕೊಳ್ಳುವಂತೆ ಕೋರಿಕೊಂಡರು. ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬAದಲ್ಲಿ ತಕ್ಷಣವೇ ೧೧೨ ಕರೆಮಾಡುವಂತೆ ಕೋರಿದರು. ಅಲ್ಲದೆ ಅನಾವಶ್ಯಕವಾಗಿ ಕರೆಮಾಡದಂತೆ ವಿನಂತಿಸಿಕೊAಡರು. ಸಭೆಯಲ್ಲಿ ಈ ವಿಭಾಗದ ಬೀಟ್ ಸಿಬ್ಬಂದಿ ಶ್ರೀನಿವಾಸ್ ಹಾಜರಿದ್ದು, ಜನರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಿಬ್ಬಂದಿಗಳಾದ ರವಿಕುಮಾರ್, ಶಾಫಿನ್ ಅಹಮ್ಮದ್ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಬಿ. ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಕೆ. ಚಿದಾನಂದ, ಬಿ.ಡಿ. ರಮೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.

- ಗಣೇಶ್ ಕುಡೆಕ್ಕಲ್