ಗೋಣಿಕೊಪ್ಪಲು, ಸೆ. ೧೧: ನಂ.೫೧೬೫೨ನೇ ಕೈ ಮಗ್ಗ ಮತ್ತು ವಿದ್ಯುತ್ ಮಗ್ಗ, ನೇಕಾರರ ಹಾಗೂ ಸಿದ್ದ ಉಡುಪು ಉತ್ಪಾದನೆ ಮತ್ತು ಮಾರಾಟ ಸಂಘದ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲುವಿನ ಪಿ.ಕೆ. ದೇವಾನಂದ್, ಉಪಾಧ್ಯಕ್ಷರಾಗಿ ವೀರಾಜಪೇಟೆಯ ಪೌಲ್ಗ್ಸೆವಿಯರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ೫ ವರ್ಷಗಳಿಗೆ ಆಡಳಿತ ಮಂಡಳಿ ರಚನೆಯಾಗಿದೆ. ನೂತನ ಸಂಘದ ನಿರ್ದೇಕರಾಗಿ ಪಿ.ಕೆ.ವಿಶ್ವನಾಥ್, ಸಾಜಿಅಚ್ಚುತ್ತನ್, ಪಿ.ಟಿ. ಸೈಮನ್, ಪಿ.ಕೆ. ವಿಜಯಕುಮಾರ್, ಪಿ.ಡಿ. ಅಮೃತ್, ಪಿ.ಡಿ. ಅಕ್ಷತ್, ಪಡಿಕಲ್ ಪ್ರಕಾಶ್, ಪಿ.ಜಿ. ಯಮುನಾ, ಪಿ.ಎಸ್. ಶೈಲ, ಕೆ.ಎಂ. ಫಾತಿಮಾ ಹಾಗೂ ಹೆಚ್.ಎ. ಕಸ್ತೂರಿ ಆಯ್ಕೆಯಾಗಿದ್ದಾರೆ. ಅಭಿವೃದ್ಧಿಯತ್ತ ಸಂಘ ಸಾಗಲು ಆಡಳಿತ ಮಂಡಳಿ ಒಮ್ಮತದ ತೀರ್ಮಾನಗಳನ್ನು ಕೈಗೊಂಡು ಇವುಗಳನ್ನು ಅನುಸ್ಠಾನಗೊಳಿಸ ಬೇಕೆಂದು ಚುನಾವಣಾಧಿಕಾರಿ ಮೋಹನ್ತಿಳಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ದೇವಾನಂದ್, ಪೊನ್ನಂಪೇಟೆ, ವೀರಾಜಪೇಟೆ, ಹುದಿಕೇರಿ,ಕುಟ್ಟ, ಹಾಗೂ ಬಾಳೆಲೆ, ಹೋಬಳಿಗಳನ್ನು ಒಳಗೊಂಡು ಕೈಮಗ್ಗ ಮತ್ತು ವಿದ್ಯುತ್ ಮಗ್ಗ, ನೇಕಾರರ ಹಾಗೂ ಸಿದ್ಧ ಉಡುಪು ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘವನ್ನು ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಅಸ್ತಿತ್ವಕ್ಕೆ ತರಲಾಗಿದೆ.
೫ ಹೋಬಳಿಗಳಿಗೆ ಒಳಪಡುವ ಗ್ರಾಮಗಳಲ್ಲಿರುವ ಅಸಕ್ತ ಅರ್ಹರನ್ನು ಈ ನೂತನ ಸಂಘದಲ್ಲಿ ಸಾಮಾನ್ಯ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಬಟ್ಟೆ ನೇಕಾರಿಕೆ ಸಿದ್ಧ, ಉಡುಪು ತಯಾರಿಕೆ, ಟೈಲರ್ ಕೆಲಸ, ಸಿದ್ಧ ಉಡುಪು ಮಾರಾಟ, ಉಡುಪು ತಯಾರಿಕೆಗೆ ಸಂಬAಧ ಪಟ್ಟ ಕಚ್ಚಾ ಮಾಲುಗಳ ಮಾರಾಟ,ಇಸ್ತಿç ಕೆಲಸ ಮುಂತಾದ ಉಡುಪು ತಯಾರಿಕೆಗೆ ಸಂಬAಧ ಪಟ್ಟ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಹಾಗೂ ತೊಡಗಿಸಿಕೊಳ್ಳಲು ಬಯಸುವ ವರನ್ನು ಸಂಘಟಿತರನ್ನಾಗಿ ಮಾಡುವುದು ಈ ಸಂಘದ ಮೂಲ ಉದ್ದೇಶವಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಸಂಘದ ವತಿಯಿಂದ ಆರ್ಥಿಕ ಹಾಗೂ ತಾಂತ್ರಿಕ ಸಹಕಾರ ನೀಡಲಾಗುವುದು.
ಸಹಕಾರ ಸಂಘದ ಸಕ್ರೀಯ ಸದಸ್ಯರಾಗಿದ್ದು ತಮ್ಮ ಗ್ರಾಮದಲ್ಲಿ ವಾಸವಿರುವ ಸಹ ಸದಸ್ಯರೊಂದಿಗೆ ಗುಂಪು ಸೇರಿ ಸಿದ್ಧ ಉಡುಪು ತಯಾರಿಕಾ ಘಟಕವನ್ನು ಸ್ಥಾಪಿಸಲು ಬಯಸಿದ್ದಲ್ಲಿ ಅಂತಹ ಉಡುಪುಗಳಿಗೆ ಘಟಕ ಸ್ಥಾಪಿಸಲು ಬೇಕಾದ ಯೋಜನಾ ವರದಿಯನ್ನು ಸಿದ್ಧಪಡಿಸುವುದು, ರಾಷ್ಟಿçÃಕೃತ ಬ್ಯಾಂಕುಗಳಿAದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ದೊರಕಿಸಿ ಕೊಡುವುದು. ಇಲಾಖೆಯಿಂದ ಸಹಾಯಧನ ಕೊಡಿಸಿ ಕೊಡುವುದು, ಕಾರ್ಖಾನೆಯ ಸುಗಮ ಕಾರ್ಯ ನಿರ್ವಹಣೆಗೆ ಬೇಕಾದ ತರಬೇತಿ ಮತ್ತು ಮಾರ್ಗ ನಿರ್ದೇಶನ ನೀಡುವುದು, ಕೆಲಸ ಒದಗಿಸುವುದು, ಕಚ್ಚಾ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದರು. ನೂತನ ನಿರ್ದೇಶಕ ಸಾಜಿ ಅಚ್ಚುತ್ತನ್ ಮಾತನಾಡಿ ವಿವಿಧ ಹೋಬಳಿಗಳಲ್ಲಿ ಸಾಕಷ್ಟು ಮಂದಿ ಉದ್ಯೋಗವಿಲ್ಲದೆ ಕಷ್ಟದಲ್ಲಿದ್ದಾರೆ. ಇಂತಹವರನ್ನು ಗುರುತಿಸಿ ಸಹಾಯ ಹಸ್ತ ನೀಡಬೇಕು. ಮುಂದಿನ ದಿನದಲ್ಲಿ ಸೊಸೈಟಿಯ ಅಭಿವೃದ್ದಿಗೆ ವಿವಿಧ ಕಾರ್ಯಕ್ರಮ ವನ್ನು ಅಳವಡಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸೊಸೈಟಿಯ ನೂತನ ಸಿಇಒ ಕುಪ್ಪಂಡ ಮೀರಾ ಅಯ್ಯಪ್ಪ ಸ್ವಾಗತಿಸಿ ವಂದಿಸಿದರು.