ಮಡಿಕೇರಿ, ಸೆ. ೯: ಗಣೇಶೋತ್ಸವ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಾರ್ವಜನಿಕ ಸಭೆ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ನಡೆಯಿತು. ಪೊಲೀಸ್ ನಿರೀಕ್ಷಕ ರವಿಕಿರಣ್ ಅವರು, ಸರಕಾರದ ನಿಯಮ ಪಾಲನೆಯೊಂದಿಗೆ ಗಣೇಶೋತ್ಸವ ಆಚರಿಸಬೇಕು, ಸೌಹಾರ್ದತೆ ಕಾಪಾಡಬೇಕು. ಯಾವುದೇ ಸಂದರ್ಭದಲ್ಲೂ ಏನಾದರೂ ಸಮಸ್ಯೆ, ತೊಂದರೆಗಳಿದ್ದರೆ, ಇಲಾಖೆಯ ೧೧೨ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದರು. ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.