ಸುAಟಿಕೊಪ್ಪ, ಸೆ. ೯ : ಇದೀಗ ಸುರಿಯುತ್ತಿರುವ ಮಳೆ ಕಾಫಿ, ಕರಿಮೆಣಸು ಫಸಲಿಗೆ ಹಾನಿಯಾಗುತ್ತಿದ್ದು, ಬೆಳೆಗಾರರ ಮೊಗದಲ್ಲಿ ಆತಂಕವುAಟುಮಾಡಿದೆ.
ಜುಲೈ, ಆಗಸ್ಟ್ನಲ್ಲಿ ಸುರಿಯುತ್ತಿರುವ ಮಳೆಯಂತೆ ಸೆಪ್ಟೆಂಬರ್ನಲ್ಲಿ ಬಿಟ್ಟು ಬಿಡದ ಮಳೆ ಸುರಿಯುತ್ತಿದೆ. ಕರಿಮೆಣಸು ಕಾಯಿ ಬಲಿಷ್ಠವಾಗದೆ ಮಳೆಯಿಂದ ನೆಲಕಚ್ಚುತ್ತಿದೆ, ಮತ್ತೊಂದೆಡೆ ಅರೇಬಿಕಾ ಕಾಫಿ ಹಣ್ಣಾಗಿ ಒಡೆದು ಭೂಮಿಗೆ ಬೀಳುತ್ತಿದೆ, ರೋಬಾಸ್ಟಾ ಕೊಳೆರೋಗದಿಂದ ಕಾಯಿ ಉದುರುತ್ತಿದೆ. ಈ ವರ್ಷವಾದರೂ ಉತ್ತಮ ಫಸಲು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಪರಿತಪಿಸುತ್ತಿದ್ದಾರೆ.
ಸೆಪ್ಟೆಂಬರ್ನಲ್ಲಿ ಸಾಧಾರಣ ಮಳೆ ಬಂದರೆ ಮಾತ್ರ ಕಾಫಿ, ಕರಿಮೆಣಸು ಕಾಯಿಕಟ್ಟಲು ಸಹಕಾರಿಯಾಗಲಿದೆ. ಸೂರ್ಯನ ಬೆಳಕು ಸಹ ಆಗಾಗ್ಗೆ ಬರಬೇಕು. ಆದರೆ ಈ ವರ್ಷ ವ್ಯತಿರಿಕ್ತ ವಾತಾವರಣದಿಂದ ಮಳೆಯ ಆರ್ಭಟದಿಂದ ತೋಟದಲ್ಲಿ ಶೀತ ವಾತಾವರಣವಿದ್ದು, ಕರಿಮೆಣಸು ಕೊತ್ತು ಉದುರುತ್ತಿದೆ. ಅರೇಬಿಕಾ ಕಾಫಿ ಬಿಳಿಕಾಂಡಕೊರಕ ರೋಗದಿಂದ ನಶಿಸುತ್ತಿದೆ. ರೋಬಾಸ್ಟಾ ಕಾಫಿ ಬಲಿಷ್ಠವಾಗಿ ಕಾಯಿಕಟ್ಟುವಾಗ ಮಳೆ ಬಂದು ಉದುರುತ್ತಿದೆ. ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ, ಕೃಷಿ ಉಪಕರಣಗಳ ದರ, ರಸಗೊಬ್ಬರ ದರ ಏರಿಕೆಯಿಂದ ಹೈರಾಣಾಗಿದ್ದಾರೆ.