ಮಡಿಕೇರಿ, ಸೆ. ೯: ಕೇಂದ್ರ ಪುರಸ್ಕೃತ ಯೋಜನೆಯಾದ ಆತ್ಮ ಯೋಜನೆಯಡಿ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಖಾಲಿ ಇರುವ ಒಂದು ಉಪ ಯೋಜನಾ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಉಪ ಯೋಜನಾ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂ.ಎಸ್ಸಿ (ಕೃಷಿ, ಅರಣ್ಯ ತೋಟಗಾರಿಕೆ, ಮೀನುಗಾರಿಕೆ) ವಿದ್ಯಾರ್ಹತೆ ಹೊಂದಿದ್ದು, ಕನಿಷ್ಟ ೫ ವರ್ಷಗಳಿಂದ ಕೃಷಿ ವಿಸ್ತರಣಾ ಮತ್ತು ಸಂಬAಧಿತ ಚಟುವಟಿಕೆಗಳಲ್ಲಿ ಅನುಭವ ಹೊಂದಿರತಕ್ಕದ್ದು ಹಾಗೂ ಎಂ.ಎಸ್ ಆಫೀಸ್ನಲ್ಲಿ ಪರಿಣಿತಿ ಹೊಂದಿರಬೇಕು. (ಆತ್ಮ ಯೋಜನೆಯಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು). ಗರಿಷ್ಠ ೪೫ ವರ್ಷ ವಯೋಮಿತಿ ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾ. ೧೪ ರಂದು ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಸಲ್ಲಿಸಬೇಕು. ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ತಾ. ೧೭ ರಂದು ಸಂದರ್ಶನ ನಡೆಯಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾ ಯುವ ಸಂಘ ಪ್ರಶಸ್ತಿಗಾಗಿ
ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಮಡಿಕೇರಿ ಜಿಲ್ಲಾ ನೆಹರು ಯುವ ಕೇಂದ್ರವು ಪ್ರತಿ ವರ್ಷದಂತೆ ಈ ವರ್ಷವೂ ೨೦೨೦-೨೧ನೇ ಸಾಲಿನ ಜಿಲ್ಲಾ ಯುವ ಸಂಘ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸಂಘ-ಸAಸ್ಥೆಗಳ ನೋಂದಣಿ ಅಧಿನಿಯಮ ೧೯೬೦ರ ಪ್ರಕಾರ ನೋಂದಣಿಯಾಗಿ ನೆಹರು ಯುವ ಕೇಂದ್ರದಲ್ಲಿ ಮಾನ್ಯತೆ ಪಡೆದು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕ್ರಿಯಾತ್ಮಕವಾದ ಚಟುವಟಿಕೆಗಳ ಮೂಲಕ ಪರಿಸರ, ಗ್ರಾಮ ನೈರ್ಮಲ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮುದಾಯದ, ಗ್ರಾಮದ ಅಭಿವೃದ್ಧಿಗಾಗಿ ನಿಸ್ವಾರ್ಥತೆಯಿಂದ ಸೇವೆಯನ್ನು ಸಲ್ಲಿಸಿರುವ ಯುವಕ ಸಂಘ, ಯುವತಿ ಮಂಡಳಿ, ಮಹಿಳಾ ಮಂಡಳಿಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ‘ಯುವ ಸಂಘ ಪ್ರಶಸ್ತಿ’ ನೀಡಲಾಗುವುದು. ಪ್ರಶಸ್ತಿಯು ರೂ. ೨೫ ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸಂಘ / ಮಂಡಳಿಯ ಪ್ರಸ್ತಾವನೆಯನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು.
ಯುವ ಸಂಘಗಳು ಕಳೆದ ವರ್ಷ ಅಂದರೆ ದಿನಾಂಕ ೦೧.೦೪.೨೦೨೦ರಿಂದ ೩೦.೦೩.೨೦೨೧ರ ಅವಧಿಯಲ್ಲಿ ಸಮುದಾಯದ ಬೆಳವಣಿಗೆಗೆ ಸಲ್ಲಿಸಿರುವ ಸ್ವಯಂ ಸೇವಾ ಕಾರ್ಯಗಳ ದೃಢೀಕರಣ ಪತ್ರಗಳು, ಭಾವಚಿತ್ರ, ಪತ್ರಿಕಾ ತುಣುಕುಗಳು ಇತ್ಯಾದಿ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಅಧಿಕಾರಿಗಳ ಕಾರ್ಯಾಲಯ, ನೆಹರು ಯುವ ಕೇಂದ್ರ, ಯಶು ನಿಲಯ, ಬ್ಲಾಕ್ ನಂ.೦೮, ಕಾವೇರಿ ಲೇಔಟ್, ಮಡಿಕೇರಿ -೫೭೧೨೦೧ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ದಾಖಲೆಗಳೊಂದಿಗೆ ತಾ. ೨೫ ರಂದು ಸಂಜೆ ೫ ಗಂಟೆಯೊಳಗಾಗಿ ಸಲ್ಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ : (೦೮೨೧) ೨೨೫೪೭೦ ಅನ್ನು ಸಂಪರ್ಕಿಸಲು ಕೋರಿದೆ.