‘ಶಕ್ತಿ' ವರದಿ ಫಲಶ್ರುತಿ

ಗೋಣಿಕೊಪ್ಪಲು, ಸೆ. ೯ ಕಂದಾಯ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಯೋಗಾನಂದ್ ಸಂಬAಧಿಸಿದ ಕಂದಾಯ ಇಲಾಖೆಯ ಕಂದಾಯ ಪರಿವೀಕ್ಷಕರು, ಸರ್ವೆ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಇವರುಗಳ ಮೇಲೆ ಇಲಾಖಾ ತನಿಖೆ ಹಾಗೂ ಅಗತ್ಯ ಬಿದ್ದರೆ ಪೊಲೀಸ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಹಶೀಲ್ದಾರ್ ಯೋಗಾನಂದ್ ತಿಳಿಸಿದ್ದಾರೆ.

ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದಲ್ಲಿರುವ ಎ.ಟಿ.ಬೊಳ್ಳಮ್ಮ ಅವರ ಆಸ್ತಿಯನ್ನು ಅವರ ಗಮನಕ್ಕೆ ಬಾರದ ರೀತಿಯಲ್ಲಿ ಮತ್ತೊಬ್ಬರಿಗೆ ವರ್ಗಾವಣೆ ಮಾಡುವ ಮೂಲಕ ಇಲಾಖಾ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ 'ಶಕ್ತಿ' ಸುದ್ದಿ ಪ್ರಕಟಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು.

ಸುದ್ದಿಯ ಹಿನ್ನೆಲೆಯಲಿ ತಹಶೀಲ್ದಾರ್ ಯೋಗಾನಂದ್ ವಿಷಯಕ್ಕೆ ಸಂಬAಧಿಸಿದAತೆ ಕಡತ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ನೋಟೀಸ್ ನೀಡಿದ್ದಾರೆ.

ಮುಂದೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.

- ಹೆಚ್.ಕೆ.ಜಗದೀಶ್