ಮಡಿಕೇರಿ, ಸೆ. ೮: ಪ್ರವಾಸಿಗರಿಗೆ ಹೆಣ್ಣು ಸರಬರಾಜು ಮಾಡುತ್ತೇವೆ ಎಂದು ಬಹಿರಂಗವಾಗಿಯೇ ವೆಬ್‌ಸೈಟ್ ಬಳಸಿರುವ ಕಿರಾತಕರ ಗುಂಪೊAದು ನಿಯತ್ತಾಗಿ ಕೆಲಸ ಮಾಡುತ್ತಿರುವ ಅತಿಥಿಗೃಹ ಹಾಗೂ ಹಲವು ಹೋಂಸ್ಟೇಗಳ ಹೆಸರು ಹೇಳಿ ವಂಚಿಸುತ್ತಿರುವದರ ಜೊತೆ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುತ್ತಿರುವ ವಿಚಿತ್ರ ಬೆಳವಣಿಗೆಗಳು ಜಿಲ್ಲೆಯಲ್ಲಿ ಕಂಡು ಬರುತ್ತಿವೆ.
ಜರ್ಮನಿಯ ಇಂಟರ್ನೆಟ್ ಕಂಪೆನಿಯ ಪ್ರತ್ಯೇಕ ಪೋರ್ಟಲ್ ಒಂದನ್ನು ಬಳಸಿ ‘ಅಚಿಟಟ ಉiಡಿಟs iಟಿ ಏoಜಚಿgu’ ಎಂದು ನಕಲಿ ವಿವರಗಳನ್ನು, ಅದರಲ್ಲಿ ಹೆಣ್ಣು ಮಕ್ಕಳ ಫೋಟೋ ಹಾಗೂ ನಕಲಿ ದೂರವಾಣಿ ಸಂಖ್ಯೆಗಳನ್ನು ಜೋಡಿಸಿ ವಂಚಕರ ಗುಂಪು ಕಾರ್ಯನಿರ್ವಹಿಸುತ್ತಿದೆ. ಈ ವೆಬ್‌ಸೈಟ್ ನೋಡಿ ಮರುಳಾಗುವ ಹೆಣ್ಣು ಬಾಕ ಪ್ರವಾಸಿಗರು ಹಾಗೂ ಗ್ರಾಹಕರಿಗೆ ಜಿಲ್ಲೆಯ ವಿವಿಧ ಹೊಟೇಲ್‌ಗಳ ಹೆಸರು ಹೇಳಿ ಅಲ್ಲಿಗೆ ತೆರಳುವಂತೆ ವಂಚಕರು ನಂಬಿಸಿ ಹಣ ಪಾವತಿಸಿಕೊಂಡು ನಂತರ ದೂರವಾಣಿ ಕರೆಗೂ ಲಭ್ಯವಾಗದೆ ಪರಾರಿಯಾಗುತ್ತಾರೆ.
ತಾ. ೭ ರಾತ್ರಿ ೭.೪೦ರ ವೇಳೆಗೆ ಮಡಿಕೇರಿಯ ಗೌರವದ ಅತಿಥಿಗೃಹ (ಐoಜgiಟಿg) ಒಂದಕ್ಕೆ ೯೨೯೪೫೯೨೮೫೯ ನಂಬರಿನಿAದ ಕರೆ ಬಂದಿತು. ತಾನು ತೌಸಿಫ್ ಎಂದೂ, ಟ್ರಾವಲ್ ಏಜೆಂಟ್ ಎಂದೂ ಆತ ಪರಿಚಯಿಸಿಕೊಂಡ. ತನ್ನ ಕಡೆಯ ೩ ಗ್ರಾಹಕರು ಕಾರಿನಲ್ಲಿ ಬಂದಿದ್ದು, ಹೊಟೇಲ್ ಎದುರು ಇದ್ದಾರೆ; ಅವರನ್ನು ಬರಮಾಡಿಕೊಳ್ಳಿ ಎಂದ. ಈ ಮಳೆಗಾಲದಲ್ಲಿ ಅತಿಥಿಗಳೇ ದೇವರಂತೆ ಕಾಣುವ ತವಕದಲ್ಲಿ ಹೊಟೇಲ್ ಸಿಬ್ಬಂದಿ ಹೊರ ಹೋಗಿ ನಮಸ್ಕರಿಸಿ ಅತಿಥಿಗಳನ್ನು ಹೊಟೇಲ್ ಒಳಕ್ಕೆ ಬರಮಾಡಿಕೊಂಡರು. ಹೊಟೇಲ್ ದರ, ವ್ಯವಸ್ಥೆಗಳನ್ನು ಎಲ್ಲವನ್ನೂ ತಿಳಿದುಕೊಂಡ ‘‘ಗ್ರಾಹಕರು’’ ಹುಡುಗಿಯರು ಎಷ್ಟು ಹೊತ್ತಿಗೆ ಬರುತ್ತಾರೆ? ಎಂದು ವಿಚಾರಿಸಿದರು.
ಸಿಟ್ಟುಗೊಂಡ ಹೊಟೇಲ್ ಸಿಬ್ಬಂದಿ ಗ್ರಾಹಕರನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ವಿಚಾರಿಸಿದಾಗ, ಹೊಟೇಲ್‌ಗೆ ಕರೆ ಮಾಡಿದ್ದ ತೌಸಿಫ್ ಎಂಬಾತ ಈ ಲಾಡ್ಜ್ನಲ್ಲಿ ವ್ಯವಸ್ಥೆ
(ಮೊದಲ ಪುಟದಿಂದ) ಮಾಡಿರುವುದಾಗಿ ಹೇಳಿ ತಮ್ಮ ಮೊಬೈಲ್ ಮೂಲಕ ೧೦೦೦ ರೂಪಾಯಿ ವರ್ಗಾಯಿಸಿಕೊಂಡ ಬಗ್ಗೆ ಗ್ರಾಹಕರು ಮಾಹಿತಿ ನೀಡಿದರು.
ಒಟ್ಟಾರೆ ಬೆಳವಣಿಗೆಯಿಂದ ಗಲಿಬಿಲಿಗೊಂಡ ಹೊಟೇಲ್‌ನವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೆಲಸದ ಒತ್ತಡದಿಂದ ತಡವಾಗಿ ಬಂದ ಇಬ್ಬರು ಪೇದೆಗಳು ಕೂಡಾ ಈ ಪ್ರಕರಣದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ಸೈಬರ್ ಕ್ರೆöÊಂನ ಪ್ರಕರಣ ಇದು ಎಂದ ಅವರು ಹೆಣ್ಣು ಬಾಕ ಗ್ರಾಹಕರಿಗೆ ‘‘ಇಂತಹದಕ್ಕೆಲ್ಲ ಮಂಗಳೂರು ಕಡೆ ಹೋಗಿ, ಇಲ್ಲಿ ಅದೆಲ್ಲಾ ಇಲ್ಲ’’ ಎಂದು ನೊಂದ ಹೃದಯಗಳಿಗೆ ಸಾಂತ್ವನ ಹೇಳುವಂತೆ ಸಲಹೆ ನೀಡಿದರು!
ಗ್ರಾಹಕರು ಮತ್ತು ತೌಸಿಪ್ ನಡುವೆ ವಾಟ್ಸ್ಆ್ಯಪ್‌ನಲ್ಲಿ ನಡೆದ ಸಂಭಾಷಣೆಯನ್ನು ಹೊಟೇಲ್‌ನವರು ಗಮನಿಸಿದಾಗ ವಿಚಿತ್ರ ಹಾಗೂ ಆಶ್ಚರ್ಯಕರ ವಿವರಗಳು ಲಭ್ಯವಾದವು.
ಗ್ರಾಹಕರು ಅಚಿಟಟ ಉiಡಿಟs ಎಂದು ಗೂಗಲ್‌ನಲ್ಲಿ ಹುಡುಕಿದಾಗ ಬೆಂಗಳೂರು, ಕೊಡಗು ಎಂದೆಲ್ಲಾ ವಿವರ ಬರುತ್ತದೆ. ಅದರಲ್ಲಿ ಆಯ್ಕೆಗೆ ಅವಕಾಶವಿರುತ್ತದೆ. ಅಲ್ಲಿನ ನಂಬರಿಗೆ ಕರೆ ಮಾಡಿದರೆ ಕೊಡಗಿನ ವಿವಿಧ ಹೋಂಸ್ಟೇಗಳು ಹಾಗೂ ಲಾಡ್ಜ್ಗಳ ಹೆಸರುಗಳನ್ನು ಗ್ರಾಹಕರಿಗೆ ಕಿರಾತಕರು ನೀಡುತ್ತಾರೆ. ತಾ. ೭ ರಂದು ಕೂಡಾ ಮಡಿಕೇರಿ ಪಟ್ಟಣ ಮಧ್ಯೆ ಇರುವ ಲಾಡ್ಜ್ನ ವಿವರ ನೀಡಿದ ತೌಸಿಫ್ ಹೆಸರಿನ ವಂಚಕರ ತಂಡದ ಸದಸ್ಯ ಗ್ರಾಹಕರು ಹೊಟೇಲ್ ತಲುಪುವ ತನಕ ಗಮನ ಹರಿಸಿದ್ದಾನೆ. ಅಲ್ಲಿಂದ ಹೊಟೇಲ್‌ನವರಿಗೆ ಕರೆ ಮಾಡಿ ಗ್ರಾಹಕರಿಗೆ ಕೊಠಡಿ ನೀಡುವಂತೆ ಹೇಳಿದ್ದಾನೆ. ತಕ್ಷಣ ತನ್ನ ಮೊಬೈಲ್‌ನಲ್ಲಿದ್ದ ಕ್ಯೂ ಆರ್ ಕೋಡ್ ಅನ್ನು ಸ್ಕಾö್ಯನ್ ಮಾಡಿ ೧೦೦೦ ರೂಪಾಯಿ ಹಾಕುವಂತೆ ಕೇಳಿದ್ದಾನೆ. ಆಸೆ ಬುರುಕ ಗ್ರಾಹಕರು ಹಿಂದೆ ಮುಂದೆ ವಿಚಾರಿಸದೆ ಹಣ ಹಾಕಿದ್ದೇ ತಡ ಆ ವ್ಯಕ್ತಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಈ ವಂಚಕರ ಜಾಲದ ಹಿಂದೆ ವಿವರ ಸಂಗ್ರಹಿಸಿದಾಗ ಙಂಐWA ಎನ್ನುವ ಇಂಟರ್‌ನೆಟ್ ಕಂಪೆನಿ ಜರ್ಮನಿಯಲ್ಲಿದೆ. ೨೦೦೬ರಲ್ಲಿ ಅದು ಸ್ಥಾಪನೆಗೊಂಡು ನಂತರ ೩ ವೆಬ್ ಅಪ್ಲಿಕೇಷನ್‌ಗಳನ್ನು ಆರಂಭಿಸಿದೆ. ಅದರಲ್ಲಿ ಐಔಅಂಓಖಿಔ ಎಂಬ ಪೋರ್ಟಲ್ ಒಂದಿದೆ. ಅದರ ಬಗ್ಗೆ ವಿವರ ನೀಡಿರುವ ಸಂಸ್ಥೆ ನೇರವಾಗಿ ‘‘ಸ್ಥಳೀಯವಾಗಿ ಮೋಜನ್ನು ಖರೀದಿಸುವುದು ಹಾಗೂ ಮಾರಾಟ ಮಾಡುವುದು’’ ಎಂದು ಪ್ರಕಟಿಸಿದೆ.
ಇದನ್ನ ಬಳಸಿಕೊಂಡಿರುವ ಮೋಸದ ಜಾಲ ಕೊಡಗಿನಲ್ಲಿಯೂ ಗ್ರಾಹಕರಿಗೆ ಯುವತಿಯನ್ನು ಸರಬರಾಜು ಮಾಡಲು ವ್ಯವಸ್ಥೆ ಇದೆ ಎಂದು ಬರೆದುಕೊಂಡು ಅಪರಿಚಿತ ಹುಡುಗಿಯರ ಫೋಟೋಗಳನ್ನು ಅದರಲ್ಲಿ ಹಾಕಿದೆ. ಚಿತ್ರದ ಮೇಲೆ ದೂರವಾಣಿ ಸಂಖ್ಯೆಗಳನ್ನೂ ಪ್ರಕಟಿಸಿದೆ. ವೆಬ್‌ಸೈಟ್ ತೆಗೆದು ಬಾಯಿ ಚಪ್ಪರಿಸಿಕೊಂಡು ಅಲ್ಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಗ್ರಾಹಕ ಹಣ ಕಳಕೊಳ್ಳುವುದರ ಜೊತೆ ಕೆಲವೊಮ್ಮೆ ಮಾನ ಹರಾಜು ಮಾಡಿಕೊಳ್ಳಲೂ ತಯಾರಿರಬೇಕು. ಯುವತಿಯರ ಚಿತ್ರದ ಮೇಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಪರಿಚಿತ ವ್ಯಕ್ತಿ ಕರೆ ಸ್ವೀಕರಿಸಿ ಗ್ರಾಹಕರನ್ನೂ ಬಲೆಗೆ ಸೆಳೆದುಕೊಳ್ಳುತ್ತಾನೆ.
ಕರೆಗಳು ಮುಂದುವರಿದAತೆ ಗ್ರಾಹಕ ‘ರಾತ್ರಿಯ ಆಸೆಯಿಂದ’ ಹಣ ವರ್ಗಾವಣೆ ಮಾಡುತ್ತಾನೆ. ಹಣ ಪಡಕೊಂಡವ ನಂತರ ದೂರವಾಣಿ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗುತ್ತಾನೆ. ಮರ್ಯಾದೆಗೆ ಹೆದರುವ ಗ್ರಾಹಕ ಈ ಬಗ್ಗೆ ಪೊಲೀಸ್ ಪುಕಾರು ನೀಡುವದಿರಲಿ, ತನ್ನ ಹೆಂಡತಿಗೆ ಮಾಹಿತಿ ಸಿಗದಿದ್ದರೆ ಸಾಕು ಎಂದು ಊರೇ ಬಿಟ್ಟು ಓಡುತ್ತಾನೆ.
ಇತ್ತೀಚೆಗೆ ಮಡಿಕೇರಿ ಗೌಳಿ ಬೀದಿಯ ನಿವಾಸಿಯೊಬ್ಬರು ಬೆಂಗಳೂರಿನಿAದ ರಾತ್ರಿ ಬಸ್‌ನಲ್ಲಿ ಹೊರಟು ಬೆಳಿಗ್ಗೆ ೫ ಕ್ಕೆ ಮಡಿಕೇರಿ ತಲುಪಿದರು. ಗೌಳಿಬೀದಿಯತ್ತ ನಡೆದು ಹೋಗುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಬೈಕ್ ಒಂದರಲ್ಲಿ ಬಂದ ಇಬ್ಬರು ಯುವಕರು ‘‘ಇSಅಔಖಖಿS’’ ಬೇಕಾ? (ಯುವತಿಯರ ಬಗ್ಗೆ ಕೋಡ್ ಶಬ್ದ) ಎಂದು ಕೇಳಿದ್ದಾರೆ. ಯುವಕರಿಗೆ ಆ ವ್ಯಕ್ತಿ ಸ್ಥಳೀಯರು ಎಂದು ಗೊತ್ತಾಗುತ್ತಲೇ ಅಲ್ಲಿಂದ ಜಾಗ ಕಿತ್ತಿದ್ದಾರೆ.
ಕೊಡಗಿನ ಹಲವೆಡೆ ಇಂತಹ ಪ್ರಕರಣಗಳು ನಡೆದಿವೆ ಎನ್ನಲಾಗಿದ್ದು, ಹಲವು ಸ್ಥಳೀಯರೂ ಕೂಡಾ ಮೋಸದ ದಂಧೆಯಲ್ಲಿ ಭಾಗಿಗಳಾಗುತ್ತಿರುವ ಬಗ್ಗೆ ಶಂಕೆ ಇದೆ.
ಕೊಡಗಿನ ಪ್ರವಾಸೋದ್ಯಮದ ಮೇಲೆ ಕೆಟ್ಟ ಚಿತ್ರಣ ಬಿಂಬಿಸಿ, ಈ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುತ್ತಿರುವ ಕಿರಾತಕರ ಬಗ್ಗೆ, ಮೋಸದ ಜಾಲದಲ್ಲಿ ಭಾಗಿಯಾಗಿರುವವರ ಬಗ್ಗೆ ಜಿಲ್ಲಾಡಳಿತ ತುರ್ತು ಗಮನ ಹರಿಸಬೇಕೆಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾಗಿಯಾಗಿರುವವರು ಒತ್ತಾಯಿಸಿದ್ದಾರೆ.