ಮಡಿಕೇರಿ, ಸೆ. ೮: ಗೌರಿ ಗಣೇಶ ಹಬ್ಬ ಹಿನ್ನೆಲೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಇಂದು ನಗರದ ಕೋಟೆ ಗಣಪತಿ ದೇವಾಲಯಲಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಅರುಣ್ ಕುಮಾರ್ ಇತರರು ಇದ್ದರು. ಕೋವಿಡ್ ೧೯ ಹಿನ್ನೆಲೆ ಸರ್ಕಾರದ ನಿಯಮ ಪಾಲಿಸಿ, ಪೂಜಾ ಕಾರ್ಯ ನಡೆಯಲಿದೆ. ಈಡುಗಾಯಿ ಪೂಜೆಗೆ ಅವಕಾಶವಿದೆ ಎಂದು ರಮೇಶ್ ಹೊಳ್ಳ ತಿಳಿಸಿದ್ದಾರೆ.