ಸಂರಕ್ಷಣಾ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆ

ಗುಡ್ಡೆಹೊಸೂರು, ಸೆ. ೮: ಅಮೆರಿಕದ ನ್ಯೂಯಾರ್ಕ್ನಲ್ಲಿ ಕಾನೂನು ವಿದ್ಯಾಲಯದಲ್ಲಿ ಪ್ರೊಫೇಸರ್ ಆಗಿರುವ ರಮ್ಯಾ ಜವಾಹರ್ ಕುಡೆಕಲ್ಲು ಅವರು ನ್ಯೂಯಾರ್ಕ್ ವಕೀಲರ ಸಂಘದ ಮಾನವಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಮಹಿಳೆಯರಿಗೆ ಈ ಸ್ಥಾನ ಲಭಿಸಿರುವುದು ಇದೇ ಪ್ರಥಮವಾಗಿದೆ. ಇವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ಕುಟುಂಬದ ದಿ. ಜವಾಹರ್ ಮತ್ತು ಡಾ. ಅಮಿತಾ ದಂಪತಿಯ ಪುತ್ರಿ. ಪ್ರಸ್ತುತ ಇವರು ಅಮೆರಿಕದ ನ್ಯೂಯಾರ್ಕ್ನಲ್ಲಿ ವಾಸವಾಗಿದ್ದಾರೆ. ದಿ.ಜವಾಹರ್ ಹಾಗೂ ಕುಶಾಲನಗರದಲ್ಲಿ ವೈದ್ಯೆ ವೃತ್ತಿ ನಡೆಸುತ್ತಿರುವ ಡಾ. ಅಮಿತಾ ಕುಡೆಕಲ್ಲು ಅವರ ಪುತ್ರಿ.