ಮಡಿಕೇರಿ, ಸೆ. ೭: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣ ಅಂಕಿ - ಅಂಶಗಳ ಪ್ರಕಾರ ತುಸು ಕಡಿಮೆ ಇದೆ. ಆದರೆ ಪ್ರಸಕ್ತ ವರ್ಷಾರಂಭದಿAದ ಈ ತನಕವೂ ಜಿಲ್ಲೆಯಲ್ಲಿ ಮಳೆಯ ಸನ್ನಿವೇಶವೇ ಕಂಡು ಬಂದಿರುವದು ಈ ಬಾರಿಯ ವಾತಾವರಣದಲ್ಲಿನ ಬದಲಾವಣೆ ಯಾಗಿದೆ. ಬಿಸಿಲಿನ ದಿನಗಳು ಜನವರಿಯಿಂದ ಈಗಿನವರೆಗೂ ಕಡಿಮೆ ಎನ್ನುವಂತಾಗಿದ್ದು, ಇಡೀ ಜಿಲ್ಲೆ ಶೀತಮಯವಾದ ದಿನಗಳನ್ನೇ ಕಾಣುವಂತಾಗಿದೆ. ವಾತಾವರಣದಲ್ಲಿ ಏರು - ಪೇರಿನ ಪರಿಣಾಮವಾಗಿ ಈ ವರ್ಷ ಜನವರಿ ತಿಂಗಳಿನಿAದಲೇ ಮಳೆ ಸುರಿಯುತ್ತಿದೆ. ಮಾರ್ಚ್ ತಿಂಗಳು ಹೊರತುಪಡಿಸಿದರೆ, ಸೆಪ್ಟೆಂಬರ್ ತನಕದ ಇನ್ನುಳಿದ ಎಲ್ಲಾ ತಿಂಗಳೂ ಜಿಲ್ಲೆ ಮಳೆಯನ್ನು ಕಂಡಿದೆ.

ಅದರಲ್ಲೂ ಜೂನ್ ಎರಡನೇ ವಾರದಲ್ಲಿ ಮಳೆಗಾಲ ಪ್ರಾರಂಭದ ಬಳಿಕ ಒಂದಷ್ಟು ಅಬ್ಬರದ ಮಳೆ ಜಿಲ್ಲೆಯನ್ನು ಕೆಲದಿನಗಳ ಕಾಲ ನಲುಗುವಂತೆ ಮಾಡಿತ್ತು. ಅಂಕಿ - ಅಂಶಗಳ ಪ್ರಕಾರ ಹಿಂದಿನ ಮೂರು ವರ್ಷಗಳಿಗಿಂತ ಮಳೆಯ ಪ್ರಮಾಣ ಕಡಿಮೆ ಇದ್ದರೂ ಈ ಬಾರಿಯ ಸನ್ನಿವೇಶ ಕೃಷಿ ಪ್ರಧಾನವಾದ ಹಾಗೂ ಕಾಫಿ ಫಸಲಿನ ಆಧಾರಿತವಾಗಿರುವ ಕೊಡಗಿನಲ್ಲಿ ವ್ಯತಿರಿಕ್ತ ಪರಿಸ್ಥಿತಿಯನ್ನು ಸೃಷ್ಟಿಸಿರುವದರಲ್ಲಿ ಎರಡು ಮಾತಿಲ್ಲ.

ಜನವರಿ ನಡುಭಾಗದಲ್ಲಿ ಯಾರೂ ಊಹಿಸದಿದ್ದ ಮಾದರಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ

(ಮೊದಲ ಪುಟದಿಂದ)À ಮಳೆ ಸುರಿದಾಗ ಜಿಲ್ಲೆಯ ಮಂದಿ ಅಗತ್ಯವಾದ ಸಮಯದಲ್ಲಿ ಕಾಫಿಗೆ ಹೂಮಳೆ ದೊರೆತ ಬಗ್ಗೆ ಹರ್ಷಚಿತ್ತರಾಗಿದ್ದರು. ಆ ಅವಧಿಯಲ್ಲಿ ಶುರುವಿಟ್ಟುಕೊಂಡ ಮಳೆ ನಂತರ ಎದುರಾದ ಬೇಸಿಗೆಯ ಅವಧಿಯನ್ನೂ ಈ ವರ್ಷ ಮರೆ ಮಾಚಿತ್ತು. ಮಾರ್ಚ್ ತಿಂಗಳು ಹೊರತುಪಡಿಸಿದರೆ ಜನವರಿಯಿಂದ ವಾಡಿಕೆಯಂತೆ ಮಳೆಗಾಲ ಆರಂಭಕ್ಕೆ ಮುಂಚಿತವಾದ ಮೇ ಅಂತ್ಯದ ತನಕವೂ ಆಗಾಗ್ಗೆ ಎದುರಾದ ವಾತಾವರಣದ ಅಸಹಜತೆಯ ಪರಿಣಾಮವಾಗಿ ಮಳೆ ಒಂದು ರೀತಿಯಲ್ಲಿ ನಿರಂತರವಾಗಿತ್ತು.

ತದನAತರದಲ್ಲಿ ಮಳೆಗಾಲ ಇದರೊಂದಿಗೆ ಮಿಳಿತವಾಗಿದ್ದು, ಜೂನ್ ಎರಡನೇ ವಾರದಿಂದ ಕೆಲವು ದಿನಗಳ ಕಾಲ ಭಾರೀ ಗಾಳಿ - ಮಳೆಯಾಗಿದ್ದು, ಹಲವು ಸಮಸ್ಯೆಗಳು ಎದುರಾದವಲ್ಲದೆ, ಪ್ರವಾಹ ಪರಿಸ್ಥಿತಿ ಎದುರಾಗುವ ಭೀತಿಯನ್ನೂ ಸೃಷ್ಟಿಸಿತ್ತು. ಆದರೆ ಕೆಲ

ದಿನಗಳಲ್ಲಿ

ಮಳೆ ಒಂದಷ್ಟು ಕಡಿಮೆಯಾಗಿ ಪರಿಸ್ಥಿತಿ ತಿಳಿಯಾದರೂ ಮತ್ತೆ... ಮತ್ತೆ ಮಳೆ ಸುರಿಯುವದು ಮುಂದುವರಿದಿತ್ತು. ಆದರೆ ತೀವ್ರತೆ ತುಸು ಕಡಿಮೆ ಎನ್ನುವಂತಿತ್ತು. ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿಯೂ ಹೆಚ್ಚಾಗಿ ಬಿಸಿಲಿನ ದರ್ಶನವಾಗಲೇ ಇಲ್ಲ. ಇದೀಗ ಸೆಪ್ಟೆಂಬರ್ ಆರಂಭದಿAದ ಮತ್ತೊಮ್ಮೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರಕುಸಿತದ ಪರಿಣಾಮವಾಗಿ ಮಳೆ ಹೆಚ್ಚಾಗುತ್ತಿದೆ. ಒಂದೆರಡು ದಿನಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿ ಭಾಗಮಂಡಲ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ದಿನವಿಡೀ ಭಾರೀ ಮಳೆ ಸುರಿಯುತ್ತಿದೆ. ಇದರೊಂದಿಗೆ ನಿನ್ನೆಯಿಂದ ಒಂದಷ್ಟು ಗಾಳಿಯ ರಭಸವೂ ಹೆಚ್ಚಾಗಿದೆ.

ಸಮಸ್ಯೆಗಳು

ನಿರಂತರವಾಗಿ ಜಿಲ್ಲೆ ಶೀತದ ವಾತಾವರಣವನ್ನೇ ಕಾಣುತ್ತಿರುವದರಿಂದ ಹಲವು ಸಮಸ್ಯೆಗಳನ್ನು ರೈತರು - ಬೆಳೆಗಾರರು, ವ್ಯಾಪಾರಸ್ಥರು ಎದುರಿಸುವಂತಾಗಿದೆ. ಈಗಾಗಲೇ ಅರೆಬಿಕಾ ಕಾಫಿ ಹಣ್ಣಾಗಲಾರಂಭಿಸಿದ್ದು, ಈ ಬೆಳೆಗಾರರಲ್ಲಿ ಚಿಂತೆ ಆವರಿಸಿದೆ. ಜತೆಗೆ ಕಾಂಡಕೊರಕದ ಉಪಟಳವೂ ಹೆಚ್ಚಾಗುತ್ತಿದೆ. ರೋಬಸ್ಟಾ ಕಾಫಿಗೂ ಕೊಳೆರೋಗ ಕಂಡು ಬಂದಿದ್ದು, ಕಾಫಿ ಉದುರುವಿಕೆಯೂ ಹೆಚ್ಚಾಗತೊಡಗಿದೆ. ಮಣ್ಣು ತೀರಾ ತೇವಾಂಶದಿAದಲೇ ಕೂಡಿದ್ದು, ಇದೇ ಪರಿಸ್ಥಿತಿ ಇನ್ನಷ್ಟು ದಿನಗಳ ಕಾಲ ಎದುರಾದರೆ ಇನ್ನೂ ಕೆಲವು ವ್ಯತಿರಿಕ್ತ ಪರಿಣಾಮಗಳು ಉಂಟಾಗಲಿವೆ. ತೋಟದಲ್ಲಿ ಕಳೆ ಕೊಚ್ಚುವ ಕೆಲಸ ನಿರ್ವಹಿಸಿದರೂ ನಿರಂತರ ಮಳೆಯಿಂದಾಗಿ ಇದು ಮತ್ತೆ ಮತ್ತೆ ಬೆಳೆಯುತ್ತಿದೆ. ಕಾಫಿ ಮಾತ್ರವಲ್ಲದೆ ಇತರ ಬೆಳೆಗಳಿಗೂ ವಾತಾವರಣದಿಂದ ಧಕ್ಕೆಯಾಗುತ್ತಿದೆ.

ಕೊರೊನಾ ಸಂಕಷ್ಟ ಒಂದೆಡೆಯಾದರೆ ಮಳೆ - ಚಳಿಯ ಪರಿಣಾಮವಾಗಿ ನಗರ ಪಟ್ಟಣಗಳಲ್ಲಿ ಜನರ ಓಡಾಟವೂ ಕಡಿಮೆಯಾಗುತ್ತಿದ್ದು, ವ್ಯಾಪಾರಸ್ಥರಿಗೂ ಸಂಕಷ್ಟ ಎದುರಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ ಮಡಿಕೇರಿ ತಾಲೂಕನ್ನು ಮಾತ್ರ ಅತಿವೃಷ್ಟಿ ಪೀಡಿತ ಎಂದು ಸರಕಾರ ಘೋಷಿಸಿದ್ದು, ಇತರ ತಾಲೂಕನ್ನೂ ಈ ಪಟ್ಟಿಗೆ ಸೇರಿಸಿ ಸರಕಾರ ಸ್ಪಂದಿಸಬೇಕೆAಬದು ರೈತಾಪಿ ವರ್ಗದ ಬೇಡಿಕೆಯಾಗಿದೆ.