ಮಡಿಕೇರಿ, ಸೆ. ೮: ಭಾರತದ ಏಕೈಕ ಬಾಹ್ಯಾಕಾಶ ಸಂಸ್ಥೆಯಾದ ಪ್ರತಿಷ್ಠಿತ ಇಸ್ರೋ (ISಖಔ) ಸಂಸ್ಥೆಯು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಬಳಸುವ ‘ಲಾಂಚ್’ ವಾಹನಗಳಲ್ಲಿ ಒಂದಾದ ‘ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (PSಐಗಿ)ನ ಪ್ರತಿರೂಪವನ್ನು ಜಿಲ್ಲೆಯ ಚೇರಂಗಾಲದಲ್ಲಿನ ಕಾವೇರಿ ಜನ್ಮ ಭೂಮಿ ಟ್ರಸ್ಟ್ನ ಆವರಣದಲ್ಲಿ ಸ್ಥಾಪಿಸಲಾಗಿದ್ದು, ತಾ.೧೧ ರಂದು ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಕಾವೇರಿ ಜನ್ಮ ಭೂಮಿ ಟ್ರಸ್ಟ್ನ ವ್ಯವಸ್ಥಾಪನಾ ಟ್ರಸ್ಟಿಯಾದ ವಕೀಲ ಮೊಟ್ಟನ ಸಿ.ರವಿಕುಮಾರ್ ಅವರು ತಿಳಿಸಿದ್ದಾರೆ. ಮಡಿಕೇರಿ, ಸೆ. ೮: ಭಾರತದ ಏಕೈಕ ಬಾಹ್ಯಾಕಾಶ ಸಂಸ್ಥೆಯಾದ ಪ್ರತಿಷ್ಠಿತ ಇಸ್ರೋ (ISಖಔ) ಸಂಸ್ಥೆಯು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಬಳಸುವ ‘ಲಾಂಚ್’ ವಾಹನಗಳಲ್ಲಿ ಒಂದಾದ ‘ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (PSಐಗಿ)ನ ಪ್ರತಿರೂಪವನ್ನು ಜಿಲ್ಲೆಯ ಚೇರಂಗಾಲದಲ್ಲಿನ ಕಾವೇರಿ ಜನ್ಮ ಭೂಮಿ ಟ್ರಸ್ಟ್ನ ಆವರಣದಲ್ಲಿ ಸ್ಥಾಪಿಸಲಾಗಿದ್ದು, ತಾ.೧೧ ರಂದು ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಕಾವೇರಿ ಜನ್ಮ ಭೂಮಿ ಟ್ರಸ್ಟ್ನ ವ್ಯವಸ್ಥಾಪನಾ ಟ್ರಸ್ಟಿಯಾದ ವಕೀಲ ಮೊಟ್ಟನ ಸಿ.ರವಿಕುಮಾರ್ ಅವರು ತಿಳಿಸಿದ್ದಾರೆ. ನಡೆಸಿದ್ದ ವಕೀಲ ಮೊಟ್ಟನ ಸಿ. ರವಿಕುಮಾರ್ ಅವರು ಇಸ್ರೋ ಅಧ್ಯಕ್ಷ ಕೆ.ಸಿವನ್ ಅವರಲ್ಲಿ ಕಾವೇರಿ ಜನ್ಮ ಭೂಮಿ ಟ್ರಸ್ಟ್ನ ಆವರಣದಲ್ಲಿ ವಿಜ್ಞಾನಿಗಳ ಗೌರವಾರ್ಥವಾಗಿ ಪಿ.ಎಸ್.ಎಲ್.ವಿ ಪ್ರತಿರೂಪವನ್ನು ನಿರ್ಮಿಸುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಸಿವನ್ ಅವರು, ಇಸ್ರೋ ಸಂಸ್ಥೆಗೆ ನೀಡುವ ಸಲುವಾಗಿ ಚೆನ್ನೆöÊನ ಆಸಕ್ತ ವಿದ್ಯಾರ್ಥಿಗಳು ತಯಾರಿಸಿದ್ದ ಪಿ.ಎಸ್.ಎಲ್.ವಿ ಉಪಗ್ರಹ ಉಡಾವಣೆ ವಾಹನದ ಪ್ರತಿರೂಪವನ್ನು ಟ್ರಸ್ಟ್ಗೆ ಕೊಡುಗೆಯಾಗಿ ನೀಡಿದರು. ಪಿ.ಎಸ್.ಎಲ್.ವಿ ಸುಮಾರು ೪೯ ಮೀಟರ್‌ನಷ್ಟು ಉದ್ದ ಇರುತ್ತದೆ. ಆದರೆ ಪತ್ರಿರೂಪವು ೧೮ ಅಡಿ ಉದ್ದದ್ದಾಗಿದೆ.

ಈ ಕುರಿತು ‘ಶಕ್ತಿ’ ಯೊಂದಿಗೆ ಪ್ರತಿಕ್ರಿಯಿಸಿದ

(ಮೊದಲ ಪುಟದಿಂದ) ರವಿಕುಮಾರ್ ಅವರು, ನಮ್ಮ ದೇಶದ ಉಪಗ್ರಹಗಳಲ್ಲದೆ ಇತರ ದೇಶಗಳ ಉಪಗ್ರಹಗಳನ್ನೂ ಪಿ.ಎಸ್.ಎಲ್.ವಿ ವಾಹನ ಬಾಹ್ಯಾಕಾಶಕ್ಕೆ ತಲುಪಿಸಿದೆ. ಒಂದೇ ಸಮನೆ ೧೦೪ ಉಪಗ್ರಹಗಳನ್ನು ಭೂಮಿ ಸುತ್ತದ ಕಕ್ಷೆಯಲ್ಲಿರಿಸಿದ್ದ ಹಿರಿಮೆಯೂ ಈ ವಾಹನಕ್ಕಿದೆ.

ಇದನ್ನು ತಯಾರಿಸಿದ ಇಸ್ರೋ ವಿಜ್ಞಾನಿಗಳ ನೆನಪಿಗಾಗಿ ಹಾಗೂ ಸಾರ್ವಜನಿಕರಿಗೆ, ಮಕ್ಕಳಿಗೆ ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಇದನ್ನು ಸ್ಥಾಪಿಸಲಾಗಿದೆ ಎಂದರು. ಕಳೆದ ಡಿಸೆಂಬರ್‌ನಲ್ಲಿಯೇ ಇಸ್ರೋ ಅಧ್ಯಕ್ಷರಿಂದಲೇ ಪ್ರತಿರೂಪ ಉದ್ಘಾಟನೆಗೊಳ್ಳಬೇಕಿತ್ತಾದರೂ ಕೋವಿಡ್‌ನಿಂದಾಗಿ ಮುಂದೂಟಲ್ಪಟ್ಟ ಕಾರ್ಯಕ್ರಮ ಇದೀಗ ಸ್ಥಳೀಯರ ಸಮ್ಮುಖದಲ್ಲಿ ತಾ. ೧೧ರಂದು ನಡೆಯಲಿದೆ ಎಂದು ತಿಳಿಸಿದರು.