ಮಡಿಕೇರಿ, ಸೆ. ೮: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಏನೆಕಲ್ಲ್ ಗ್ರಾಮದ ಅರೆಭಾಷೆ ಬಾಂಧವರು ಇವರ ಸಂಯುಕ್ತಾಶ್ರಯದಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರವು ತಾ. ೧೧ ರಿಂದ ೧೩ರ ವರೆಗೆ ಎನೆಕಲ್ಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ತಾ. ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಏನೆಕಲ್ಲ್ ಗ್ರಾಮದ ಮಾಗಣಿ ಗೌಡ್ರು, ಉದಯ ಕುಮಾರ್ ಬಾನಡ್ಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ, ಎನೆಕಲ್ಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಭವಾನಿಶಂಕರ ಪೂಂಬಾಡಿ, ಕುಲ್ಕುಂದ ಬಸವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗಿರಿಧರ ಸ್ಕಂದ, ಏನಕಲ್ಲ್ ಗ್ರಾ.ಪಂ.ಸದಸ್ಯರುಗಳಾದ ಮೋಹನ ಕೋಟಿ ಗೌಡನ ಮನೆ ಹಾಗೂ ಜಯಂತಿ ವೆಂಕಟೇಶ್ ಭಾಗವಹಿಸಲಿದ್ದಾರೆ. ತಾ. ೧೩ ರಂದು ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.