ಮಡಿಕೇರಿ, ಸೆ. ೮: ಮೈಸೂರು ಕೇಂದ್ರ ಭಾರತೀಯ ವಿದ್ಯಾಭವನದ (ಬಿವಿಬಿ) ಉಪಾಧ್ಯಕ್ಷರಾಗಿದ್ದ ಕೆ.ಬಿ. ಗಣಪತಿ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬಿವಿಬಿ ಮೈಸೂರು ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಮಿತಿ ಸದಸ್ಯರು ಹಾಗೂ ಕೇಂದ್ರೀಯ ಭವನ ನಿಯೋಜಿತ ಹಾಗೂ ಬೆಂಗಳೂರು ಬಿವಿಬಿ ನಿರ್ದೇಶಕ ಹೆಚ್.ಎನ್. ಸುರೇಶ್ ಉಪಸ್ಥಿತಿಯಲ್ಲಿ ಕೆ.ಬಿ. ಗಣಪತಿ ಅವರು ಅಧಿಕಾರ ಸ್ವೀಕರಿಸಿದರು. ಬಿವಿಬಿ ಮೈಸೂರು ಕೇಂದ್ರ ನಿರ್ಗಮಿತ ಅಧ್ಯಕ್ಷ ಪ್ರೋ. ಎ.ವಿ. ನರಸಿಂಹ ಮೂರ್ತಿ (ಎವಿಎನ್) ಅಧಿಕಾರ ಹಸ್ತಾಂತರಿಸಿದರು.