ಪೊನ್ನAಪೇಟೆ, ಸೆ. ೮: ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಸಗೂರು ಗ್ರಾಮದ ಜಯಂತಿ ಕಾಲೋನಿಯ ನಿವಾಸಿ ರಾಮು ಎಂಬವರ ಮಗ ಹೆಚ್.ಆರ್. ಕಿರಣ (೩೭) ಎಂಬವನನ್ನು ಕಾಫಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪದಡಿಯಲ್ಲಿ ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.
ಗಾAಜಾ ಮಾರಾಟದ ದಂಧೆ ನಡೆಸುತಿದ್ದ ಆರೋಪಿ ಹೆಚ್.ಆರ್. ಕಿರಣ ಯುವಕರಿಗೆ ಗಾಂಜಾ ಸರಬರಾಜು ಮಾಡುತಿದ್ದ ಎನ್ನಲಾಗಿದ್ದು, ಈತ ಸುಳುಗೋಡು ಗ್ರಾಮದಲ್ಲಿ ತನ್ನ ತಾಯಿಯ ಹೆಸರಿನಲ್ಲಿರುವ ಕಾಫಿತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದನು. ಈ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ತೋಟದಲ್ಲಿ ಬೆಳೆದಿದ್ದ ೪ ಗಾಂಜಾ ಗಿಡಗಳ ಸಮೇತ, ಆರೋಪಿ ಕಿರಣನನ್ನು ಬಂಧಿಸಿದರು. ಈತನ ವಿರುದ್ಧ ಈ ಹಿಂದೆಯೂ ಕೂಡ ಗಾಂಜಾ ಮಾರಾಟ ಆರೋಪದಡಿಯಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದ್ದು, ವಿಚಾರಣೆಯ ನಂತರ ಆರೋಪಿ ಕಿರಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಸ್ಪಿ ಕ್ಷಮಾಮಿಶ್ರಾ, ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್ ಹಾಗೂ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಡಿ.ಕುಮಾರ್, ಎಎಸ್ಐ ಉದಯಕುಮಾರ್, ಎಎಸ್ಐ ಗಣಪತಿ, ಸಿಬ್ಬಂದಿಗಳಾದ ಸತೀಶ್, ಮಹದೇಶ್ವರ ಸ್ವಾಮಿ, ಜೀವನ್, ಮಹೇಂದ್ರ, ಮಂಜುನಾಥ್, ಲೋಕೇಶ್, ಮನು, ಹರೀಶ್, ಚಲುವರಾಜು, ಪ್ರಮೀಳ, ಶೋಭ ಹಾಗೂ ಚಾಲಕ ಮಹೇಶ್ ಭಾಗವಹಿಸಿದ್ದರು.