ಕುಶಾಲನಗರ, ಸೆ. ೮: ಇಲ್ಲಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆ ಶನಿವಾರದ ಪೂಜೆಯನ್ನು ಆರ್ಯವೈಶ್ಯ ಮಂಡಳಿ ಆಶ್ರಯದಲ್ಲಿ ನಡೆಸಲಾಯಿತು.
ರಥಬೀದಿಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ ಪುರೋಹಿತ ಯೋಗೀಶ್ ಭಟ್ ನೆರವೇರಿಸಿದರು. ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಶನಿದೇವರ ಪೂಜೆ ಮಾಡಿ ಕುಲಬಾಂಧವರಿಗೆ ಮಧ್ಯಾಹ್ನ ಅನ್ನಪ್ರಸಾದ ವಿತರಿಸಿದರು. ಶನಿದೇವರ ಕಥೆಯನ್ನು ಪ್ರತಿವಾರ ಓದುತ್ತಿದ್ದ ಸುವರ್ಣಮ್ಮ ಅವರಿಗೆ ಮಂಡಳಿ ವತಿಯಿಂದ ಗೌರವಿಸಲಾಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಉಪಾಧ್ಯಕ್ಷ ಎಸ್.ಎಂ. ಸತೀಶ್, ಕಾರ್ಯದರ್ಶಿ ಬಿ.ಎಲ್. ಅಶೋಕ್, ಪಿ.ಎನ್. ಅನಿಲ್, ಎಸ್.ಎನ್. ನಾಗೇಂದ್ರ, ಯುವಜನ ಸಂಘದ ಅಧ್ಯಕ್ಷ ಕೆ.ಎನ್. ನಾಗಪ್ರವೀಣ್, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ ಇದ್ದರು.