ನಾಪೋಕ್ಲು, ಸೆ. ೮: ಮೈಸೂರಿನ ನ್ಯೂ ಮುಸ್ಲಿಂ ಹಾಸ್ಟೆಲ್ ಅಲುಮಿನಿ ಸಂಸ್ಥೆಯ ವತಿಯಿಂದ ಕೊಡಗಿನಲ್ಲಿ ಕೋವಿಡ್ ರೋಗದಿಂದ ಬಳಲುತ್ತಿರುವ ೪ ಮಂದಿಗೆ ಉಚಿತವಾಗಿ ವಿತರಿಸಲು ಆಕ್ಸಿಜನ್ ಕಾನ್ಸನ್‌ಟ್ರೇಟರ್ ಅನ್ನು ಉಮ್ಮತ್ ಒನ್ ಸಂಸ್ಥೆಗೆ ವಿತರಿಸಲಾಯಿತು. ನಂತರ ಮಾತನಾಡಿದ ಸಂಸ್ಥೆಯ ಮಹಮ್ಮದ್ ರಾಫಿ ಉಮ್ಮತ್ ಒನ್ ಕೊಡಗು ಸಂಸ್ಥೆಯ ಸಹಯೋಗದೊಂದಿಗೆ ಕೊಡಗಿನ ಸಾರ್ವಜನಿಕರು ಕೂಡ ಈ ಸೇವೆಯನ್ನು ಪಡೆಯಬಹುದಾಗಿದೆ. ಇದರ ಸೇವೆಯನ್ನು ಬಯಸುವವರು ಮಹಮ್ಮದ್ ಕೊಟ್ಟಮುಡಿ (೯೬೧೧೫೫೪೦೧೦) ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ಸರಳ ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹಿಮಾನ್, ಕಾಫಿ ಬೆಳೆಗಾರ ಶೌಕತ್ ಹಾಜಿ, ವಕೀಲ ಅಬ್ದುಲ್ ರಿಯಾಜ್, ಅಜೀಜ್ ಮಾಸ್ಟರ್, ಮೆಹಬೂಬ್ ಮಾಸ್ಟರ್, ಸಮಾಜ ಸೇವಕ ಸಲೀಂ, ಉಮ್ಮತ್ ಸಂಸ್ಥೆಯ ವ್ಯವಸ್ಥಾಪಕ ಮಹಮ್ಮದ್ ಕೊಟ್ಟಮುಡಿ ಮತ್ತಿತರರು ಇದ್ದರು.