ಕೂಡಿಗೆ, ಸೆ. ೭: ಗಣೇಶೋತ್ಸವ ಆಚರಣೆಯನ್ನು ಸರಕಾರದ ಸೂಚನೆಯಂತೆ ಆಚರಣೆ ಮಾಡುವುದರ ಮೂಲಕ ಕಾನೂನಿನ ನಿಯಮಗಳನ್ನು ಪಾಲಿಸಬೇಕೆಂದು ಕುಶಾಲನಗರ ಡಿವೈಎಸ್‌ಪಿ ಹೆಚ್.ಎಂ. ಶೈಲೇಂದ್ರ ಹೇಳಿದರು. ಕೂಡ್ಲೂರು ವ್ಯಾಪ್ತಿಯ ಪೊಲೀಸ್ ಗಸ್ತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭ ೧೧೨ ಪೊಲೀಸ್ ವಾಹನದ ತುರ್ತು ಕರೆಯ ಬಗ್ಗೆ ಜಾಗೃತಿ ಮೂಡಿಸಿದರು. ಕೂಡುಮಂಗಳೂರು ಗ್ರಾಮದ ಸಮುದಾಯ ಭವನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಪರಾಧ, ಅನೈತಿಕ ಚಟುವಟಿಕೆಗಳ ನಿಯಂತ್ರಣ ಕ್ರಮಗಳ ಬಗ್ಗೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ನಗರ ಠಾಣಾಧಿಕಾರಿ ಮಾದೇಶ್, ಸಿಬ್ಬಂದಿ ಪ್ರಸನ್ನ ಹಾಜರಿದ್ದರು.