ಪೆರಾಜೆ, ಸೆ. ೭: ಯುವಕೋಟೆ ಯುವಕಮಂಡಲ ಪುತ್ಯ ಪೆರಾಜೆ ವತಿಯಿಂದ ಇಲ್ಲಿಯ ಕೋಟೆ ಪೆರಾಜೆ ಶಾಲಾ ಆವರಣದಲ್ಲಿ ಶ್ರಮದಾನ ಹಮ್ಮಿಕೊಳ್ಳಲಾಯಿತು. ಶಾಲಾ ಆವರಣವನ್ನು ಸ್ವಚ್ಛತೆ ಮಾಡುವುದರ ಮೂಲಕ ಶ್ರಮದಾನವನ್ನು ಯಶಸ್ವಿಗೊಳಿಸಲಾಯಿತು.

ಈ ಕಾರ್ಯದಲ್ಲಿ ಸಂಘದ ಅಧ್ಯಕ್ಷ ವಿನಯ ನಿಡ್ಯಮಲೆ, ಗೌರವ ಅಧ್ಯಕ್ಷ ಸುಭಾಷ್‌ಚಂದ್ರ ಬಂಗಾರಕೋಡಿ, ಗೌರವ ಸಲಹೆಗಾರ ಚಿನ್ನಪ್ಪ ಅಡ್ಕ, ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಸೇರಿದಂತೆ ಸಂಘದ ಸದಸ್ಯರು, ಎಸ್.ಟಿ.ಎಂ.ಸಿ ಸದಸ್ಯರು ಭಾಗವಹಿಸಿದ್ದರು.