ಮಡಿಕೇರಿ, ಸೆ. ೧: ಭಾರತ ಸ್ವಾತಂತ್ರö್ಯ ಹೋರಾಟದಲ್ಲಿ ಪುಟ್ಟ ಜಿಲ್ಲೆ ಕೊಡಗಿನ ಪಾಲು ಅದ್ವಿತೀಯವಾದದು ಅದರಲ್ಲೂ ಕೊಡವರದು ಸಿಂಹ ಪಾಲಿದೆ, ಆದರೆ ವ್ಯವಸ್ತೆ ನಮ್ಮನ್ನು ಮರೆತಿರುವುದು ದುರಂತ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ವಿಷಾದಿಸಿದರು.

ಕೊಡವಾಮೆರ ಕೊಂಡಾಟ ಸಂಘಟನೆ ಪ್ರಾರಂಭಿಸಿದ ಸ್ವಾತಂತ್ರö್ಯ ಚಳುವಳಿಲ್ ಕೊಡವ ಎನ್ನುವ ಅಭಿಯಾನಕ್ಕೆ ಗೂಗಲ್ ಮೀಟ್ ವೆಬಿನಾರ್'ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಅಸಂಖ್ಯಾತ ಕೊಡವರ ಪಟ್ಟಿಯೇ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ಆದರೆ ಕೆಲವು ತಿಳಿಗೇಡಿಗಳು ಕೊಡವರ ಹೋರಾಟವನ್ನು ಕಡೆಗಣಿಸುತ್ತಾ ಅವಹೇಳನ ಮಾಡುವ ಕಾರ್ಯ ಮಾಡುತ್ತಿರುವುದು ನಮ್ಮ ದುರಂತ. ಕೊಡಗಿನಲ್ಲಿ ಸ್ವಾತಂತ್ರ‍್ಯ ಹೋರಾಟಕ್ಕೆ ಮೊದಲು ಅಡಿಯಿಟ್ಟಿದ್ದೇ ೧೯೧೨ರಲ್ಲಿ ಕೊಡಗು ಜಮೀನ್ದಾರರ ಸಂಘದಿAದ, ನಂತರ ೧೯೨೧ರಲ್ಲಿ ಪ್ರಾರಂಭವಾದ ಕೊಡಗು ಪತ್ರಿಕೆಯಿಂದ ಸ್ವಾತಂತ್ರö್ಯ ಕ್ರಾಂತಿ ಕೊಡಗಿನಲ್ಲಿ ಸಾಹಿತ್ಯ ಕ್ರಾಂತಿ ನಡೆಯಿತು. ನಂತರದ ದಿನಗಳಲ್ಲಿ ನಡೆದಿದ್ದು ಇತಿಹಾಸ. ಇಂತಹ ಐತಿಹಾಸಿಕ ಹೋರಾಟದ ಫಸಲನ್ನು ಅನುಭವಿಸುತ್ತಿರುವ ನಾವು ಸ್ವಾತಂತ್ರ‍್ಯ ಪಡೆದು ೭೫ ಸಂವತ್ಸರಗಳು ಕಳೆದ ಈ ಸಮಯದಲ್ಲಿ ಹೋರಾಟಗಾರರನ್ನು ನೆನಸಿಕೊಳ್ಳುವುದೇ ರೋಮಾಂಚನಕಾರಿ. ಕೊಡವ ಪುರುಷರಷ್ಟೇ ಸಮಾನ ಕೊಡವತಿಯರದ್ದೂ ಇದೆ, ಸ್ವಾತಂತ್ರಕ್ಕಾಗಿ ಜೈಲಿಗೆ ಹೋದ ಕೊಡವತಿಯರನ್ನು ನೆನೆಸುವ ಕಾರ್ಯವಾಗಬೇಕು. ಕೊಡವರದ್ದು ಯಾವತ್ತಿಗೂ ರಕ್ತಚೆಲ್ಲಿದ ವೀರ ಚರಿತ್ರೆ, ಯಾವತ್ತಿಗೂ ಹೇಡಿಗಳ ಚರಿತ್ರೆ ಅಲ್ಲ ಎಂದರು. ಕೊಡವ ಸ್ವಾತಂತ್ರ ಚಳುವಳಿಗಾರರನ್ನು ನೆನೆಸುವ ಅಭಿಯಾನ ಪ್ರಾರಂಭಿಸಿರುವ ಕೊಡವಾಮೆರ ಕೊಂಡಾಟ ಸಂಘಟನೆಗೆ ಅಭಿನಂದನೆ ಸಲ್ಲಬೇಕು ಎಂದರು.

ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್'ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಸೀಮ ಪತ್ರಿಕೆಯ ಸಂಪಾದಕ ಸಾಹಿತ್ಯ ಅಕಾಡೆಮಿ ಸದಸ್ಯ, ಕೊಡವಾಮೆರ ಕೊಂಡಾಟ ಸಂಘಟನೆಯ ಸದಸ್ಯರೂ ಆಗಿರುವ ಮಾಣಿಪಂಡ ಸಂತೋಷ್ ತಮ್ಮಯ್ಯ ಅವರು, ಇಡೀ ಭಾರತವೇ ಹೆಮ್ಮೆಯಿಂದ ನೆನೆಸಿಕೊಳ್ಳುತ್ತಿರುವಾಗ ನಮ್ಮ ಕೊಡವ ಜನಾಂಗದ ಸ್ವಾತಂತ್ರ‍್ಯ ಧುರೀಣರನ್ನೂ ನೆನಪಿಸಿಕೊಳ್ಳುವ ಕಾರ್ಯ ಆಗಬೇಕು ಏನ್ನೋ ಉದ್ದೇಶದಿಂದ ಕೊಡವಾಮೆರ ಕೊಂಡಾಟ ಮಾಡುತ್ತಿರುವುದು ಐತಿಹಾಸಿಕ ಅಭಿಯಾನ. ಮುಂದೆ ವರ್ಷವಿಡೀ ನಡೆಯಲಿದೆ, ಇದು ರಾಷ್ಟಿçÃಯ ದಾಖಲೆಯ ಅಭಿಯಾನ ಆಗಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗಿನ ಗಾಂಧಿ ಪಂದ್ಯAಡ ಬೊಳ್ಯಪ್ಪ ಅವರ ಪುತ್ರ ಪಂದ್ಯAಡ ವಿಜಯ್‌ಬೊಳ್ಯಪ್ಪ, ಕೊಡಗಿನ ಪ್ರಥಮ ಮುಖ್ಯಮಂತ್ರಿ ಚೆಪ್ಪುಡಿರ ಪೂಣಚ್ಚ ಅವರ ಪುತ್ರ ಚೆಪ್ಪುಡಿರ ಬೆಳ್ಯಪ್ಪ, ಸ್ವಾತಂತ್ರ‍್ಯ ಹೋರಾಟಗಾರ ಮಲ್ಲೇಂಗಡ ಚಂಗಪ್ಪ ಅವರ ಪುತ್ರಿ ಲೈಲಾಚಂಗಪ್ಪ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟಿರ ನಾಣಯ್ಯ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಮುಲ್ಲೇಂಗಡ ಮಧೋಶ್ ಪೂವಯ್ಯ, ಮೂಕಳೆಮಾಡ ರಂಜು ನಾಣಯ್ಯ, ಮಾಳೇಟಿರ ಸೀತಮ್ಮ ವಿವೇಕ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್'ಬೆಳ್ಯಪ್ಪ ಅವರು, ನಮಗಾಗಿ ದುಡಿದು, ಸವೆದು, ಮಡಿದ ನಮ್ಮ ಹಿರಿಯರನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ. ಅಂತಾ ಅಳಿಲು ಸೇವೆ ಮಾಡುವ ಅವಕಾಶ ನಮಗೆ ದೊರೆತಿರುವುದು ನಮ್ಮ ಅದೃಷ್ಟ. ಈ ಅಭಿಮಾನವೂ ವರ್ಷವಿಡೀ ನಡೆಯಲಿದ್ದು ಎಲ್ಲಾ ಕೊಡವ ಸ್ವಾತಂತ್ರ‍್ಯ ಹೋರಾಟಗಾರರ ಪರಿಚಯಿಸುವ ವೀಡಿಯೋವನ್ನು ಕನ್ನಡದಲ್ಲಿ ಮಾಡಿ, ಕೊಡವಾಮೆರ ಕೊಂಡಾಟ ಯೂಟ್ಯೂಬ್ ಚಾನಲ್'ನಲ್ಲಿ ಪ್ರಸಾರ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಮೊದಲಿಗೆ ಹಿರಿಯ ಸದಸ್ಯ ಮಾಳೆಟಿರ ಶ್ರೀನಿವಾಸ್ ಅವರು, ಎಂದಿನAತೆ ಕೊಡವ ಪದ್ದತಿಗನುಗುಣವಾಗಿ ನೆಲ್ಲಕ್ಕಿಯಲ್ಲಿ ಒಕ್ಕಣೆ ಕಟ್ಟಿ ಅಕ್ಕಿ ಹಾಕಿದರೆ, ಅಭಿಯಾನ ಸಂಚಾಲಕ ತೀತಿಮಾಡ ಸೋಮಣ್ಣ ಸ್ವಾಗತಿಸಿ, ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ಅವರು ವಂದಿಸಿದರೆ, ಸದಸ್ಯ ಮೇದುರ ಹಿತೇಶ್ ಪೂವಯ್ಯ ಕಾರ್ಯಕ್ರಮ ನಿರ್ವಹಿಸಿ, ನಿರೂಪಿಸಿದರು.