ಶನಿವಾರಸಂತೆ, ಸೆ. ೨: ಸಮೀಪದ ಕೊಡ್ಲಿಪೇಟೆ ಆರೋಗ್ಯ ಕೇಂದ್ರದ ಮುಂಭಾಗ ಸಂಚಾರಕ್ಕೆ ಅಡಚಣೆಯಾಗುವಂತೆ ಬೆಳೆದಿದ್ದ ಮರಗಳ ರೆಂಬೆ-ಕೊAಬೆಗಳನ್ನು ಅರಣ್ಯ ಇಲಾಖೆ ಮತ್ತು ವಿದ್ಯುತ್ ಇಲಾಖೆ ವತಿಯಿಂದ ಕತ್ತರಿಸಿ ಶ್ರಮದಾನ ಮಾಡಲಾಯಿತು.
ಆರೋಗ್ಯ ಕೇಂದ್ರದ ದ್ವಾರದಲ್ಲೆ ಬೆಳೆದಿದ್ದ ದೊಡ್ಡದೊಡ್ಡ ಮರಗಳ ರೆಂಬೆ-ಕೊAಬೆಗಳು ರಸ್ತೆಗೆ ಚಾಚಿಕೊಂಡಿದ್ದು, ಪಕ್ಕದಲ್ಲಿರುವ ವಸತಿಗೃಹ, ಬಂದುಹೋಗುವ ರೋಗಿಗಳಿಗೆ, ಸಾರ್ವಜನಿಕರಿಗೆ ಓಡಾಟಕ್ಕೆ ಅನಾನುಕೂಲವಾಗಿರುವುದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಪದಾಧಿಕಾರಿಗಳು, ಅರಣ್ಯ ಇಲಾಖೆ ಮತ್ತು ವಿದ್ಯುತ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಸ್ಪಂದಿಸಿದ ೨ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮರದ ರೆಂಬೆ-ಕೊAಬೆಗಳನ್ನು ತೆರವುಗೊಳಿಸಿದರು.