ಕೂಡಿಗೆ, ಸೆ. ೧: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಎದುರು ನಿರ್ಮಾಣಗೊಂಡಿರುವ ತೂಗು ಸೇತುವೆಯು ಮುರಿದು ಬೀಳುವ ಹಂತವನ್ನು ತಲುಪಿದೆ.
ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಎದುರು ಕಾವೇರಿ ನದಿಗೆ ಅಡ್ಡಲಾಗಿ ಕಳೆದ ೧೨ ವರ್ಷಗಳ ಹಿಂದೆ ಕೊಡಗು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅನೇಕ ಗ್ರಾಮಗಳಿಗೆ ಅನುಕೂಲವಾಗಲು, ಅಲ್ಲದೆ ಆ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಕೂಡಿಗೆ ಮತ್ತು ಕುಶಾಲನಗರಕ್ಕೆ ಬರಲು ಸಹಕಾರಿಯಾಗಲೆಂದು ತೂಗು ಸೇತುವೆಯನ್ನು ಮಲೆನಾಡು ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು.
ಅದರೆ ಕಳೆದ ಮೂರು ವರ್ಷಗಳ ಹಿಂದೆ ಬಂದ ಭಾರಿ ಪ್ರವಾಹದಿಂದಾಗಿ ಕಾವೇರಿ ಮತ್ತು ಹಾರಂಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ತೂಗು ಸೇತುವೆ ಮೇಲೆ ಹರಿದ ಪರಿಣಾಮವಾಗಿ ಸೇತುವೆಗೆ ಅಳವಡಿಕೆ ಮಾಡಿದ ಕಬ್ಬಿಣದ ಸರಳುಗಳು ಕೆಲ ಭಾಗದಲ್ಲಿ ಮುರಿದಿವೆ ಅಲ್ಲದೆ ನಡೆದಾಡುವ ಸಂದರ್ಭದಲ್ಲಿ ಹೆಚ್ಚು ಅಲುಗಾಡುತ್ತಿದೆ.
ಸಂಬAಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ತೂಗು ಸೇತುವೆಯನ್ನು ಪರಿಶೀಲನೆ ಮಾಡಿ ದುರಸ್ತಿ ಮಾಡಲು ಮುಂದಾಗಬೇಕೆAದು ಈ ವ್ಯಾಪ್ತಿಯ ನೂರಾರು ಗ್ರಾಮಸ್ಥರ ಆಗ್ರಹವಾಗಿದೆ.
-ಕೆ.ಕೆ. ನಾಗರಾಜಶೆಟ್ಟಿ