ಮಡಿಕೇರಿ, ಸೆ. ೧: ಕದನೂರು ಗ್ರಾಮ ಸಮೀಪ ವೀರಾಜಪೇಟೆ - ಮೂರ್ನಾಡು ಮುಖ್ಯ ರಸ್ತೆಯಲ್ಲಿ ಟಯೋಟ ಕ್ವಾಲಿಸ್ ವಾಹನ (ಕೆಎ-೦೨ ಎಂಎ-೦೦೫೫)ದಲ್ಲಿ ಅಕ್ರಮವಾಗಿ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದುದನ್ನು ವೀರಾಜಪೇಟೆ ಅರಣ್ಯ ವಲಯದ ಸಿಬ್ಬಂದಿ ಪತ್ತೆಹಚ್ಚಿ ವಾಹನ ಮತ್ತು ಮರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಗಳಾದ ಬಾಳುಗೋಡು ಗ್ರಾಮದ ಪೆರುಂಬಾಡಿಯ ಪಿ.ಜೆ. ಜಾಬಿನ್, ವೈ.ಟಿ. ರವಿ, ಹೆಚ್.ಎಂ. ಕರುಣ್, ಹೆಚ್.ಯು. ಕಿಶನ್ ಎಂಬವರುಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವೈ. ಚಕ್ರಪಾಣಿ ಮತ್ತು ವೀರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಷಿಣಿ ಎ.ಜೆ. ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳಿರ ಎಂ. ದೇವಯ್ಯ, ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಶೈಲ ಮಲ್ಲಪ್ಪ ಮಾಲಿಗೌಡ್ರ, ದೇವಯಂಡ ಸಂಜಿತ್ ಸೋಮಯ್ಯ, ಆನಂದ ಕೆ.ಆರ್., ಸಚಿನ ನಿಂಬಾಳ್ಕರ್, ಮೋನಿಷಾ ಎಂ.ಎಸ್., ಎನ್.ಎನ್. ಅಕ್ಕಮ್ಮ, ಅನಿಲ್ ಸಿ.ಟಿ., ಅರಣ್ಯ ರಕ್ಷಕರಾದ ಚಂದ್ರಶೇಖರ ಅಮರಗೋಳ, ನಾಗರಾಜ ರಡರಟ್ಟಿ, ಮಾಲತೇಶ ಬಡಿಗೇರ, ಅರುಣ ಸಿ., ಟಿ.ಎನ್. ಪ್ರಶಾಂತ್ ಕುಮಾರ್, ವಾಹನ ಚಾಲಕರಾದ ಅಚ್ಚಯ್ಯ, ಅಶೋಕ ಹಾಗೂ ವೀರಾಜಪೇಟೆ ವಲಯ ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.