ಮಡಿಕೇರಿ, ಸೆ. ೧: ನೌಕರರನ್ನು ಗುತ್ತಿಗೆ ಪಡೆದ ಏಜೆನ್ಸಿ ವೇತನ ಸರಿಯಾಗಿ ನೀಡಿಲ್ಲ ಹಾಗೂ ನೂತನವಾಗಿ ಏಜೆನ್ಸಿ ಪಡೆದ ಸಂಸ್ಥೆ ಅವೈಜ್ಞಾನಿಕ ನೀತಿಗಳನ್ನು ಅನುಸರಿಸುತ್ತಿವೆೆ ಎಂದು ಆರೋಪಿಸಿ ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿಗಳು ಜಿಲ್ಲಾಸ್ಪತ್ರೆ ಮುಂಭಾಗ ಕೊಡಗು ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಏಜೆನ್ಸಿ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ, ತಾ.೧ ರಿಂದ ಹೊಸ ಏಜೆನ್ಸಿ ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ಕಾರ್ಮಿಕರ ಟೆಂಡರ್ ಪಡೆದುಕೊಂಡಿದ್ದು, ಹಲವಾರು ಅವೈಜ್ಞಾನಿಕ ನೀತಿ ನಿಯಮಗಳನ್ನು ರೂಪಿಸಿವೆ. ನಿವೃತ್ತಿಯ ವರ್ಷವನ್ನು ೫೦ ಎಂದು ನಮೂದಿಸಿದೆ. ಅಲ್ಲದೆ ಸೇವಾ ಭದ್ರತೆಯೂ ನೀಡದೆ ವಂಚನೆ ಮಾಡುತ್ತಿದೆ. ಇದರಿಂದ ನೌಕರರಿಗೆ ತೊಂದರೆಯಾಗಲಿದ್ದು ಈ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದರು.

ಸಿಬ್ಬಂದಿ ಧನಲಕ್ಷಿö್ಮ ಮಾತನಾಡಿ, ಹಿಂದಿನ ಏಜೆನ್ಸಿ ಸರಿಯಾದ ವೇತನ ನೀಡಿಲ್ಲ. ಹೊಸದಾಗಿ ಟೆಂಡರ್ ಪಡೆದುಕೊಂಡ ಏಜೆನ್ಸಿ ಹೊಸ ರೀತಿಯ ನೀತಿ ರೂಪಿಸಿದ್ದು, ಇದರಿಂದ ಸಮಸ್ಯೆಯಾಗಲಿದೆ. ಸಂಬAಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿ ಸ್ಥಳಕ್ಕಾಗಮಿಸಿ ನೌಕರರಿಗೆ ವಾಸ್ತವಾಂಶದ ಬಗ್ಗೆ ಅರಿವು ಮೂಡಿಸಿದರಲ್ಲದೆ ಪರಿಶೀಲನೆ ನಡೆಸುವ ಭರವಸೆ ನೀಡಿದರು. ಈ ಸಂದರ್ಭ ನೂರಕ್ಕೂ ಅಧಿಕ ಮಂದಿ ಹೊರಗುತ್ತಿಗೆ ಕಾರ್ಮಿಕರು ಇದ್ದರು.