ನಾಪೋಕ್ಲು, ಸೆ. ೨: ಕೊಳಕೇರಿ ಗ್ರಾಮದಿಂದ ಮೈತ್‌ಕಾಡಿಗೆ ತೆರಳುವ ರಸ್ತೆಯನ್ನು ಡಾಂಬರಿಕರಣ ಗೊಳಿಸುವ ಸಲುವಾಗಿ ಕಳೆದ ಒಂದು ವಾರದಿಂದ ರಸ್ತೆಗೆ ಜಲ್ಲಿ ಹಾಕಲಾಗಿದ್ದು ೧೦ ದಿವಸ ಕಳೆದರೂ ಕಾಮಗಾರಿಯನ್ನು ಪ್ರಾರಂಭ ಮಾಡದಿರುವುದರಿಂದ ಈ ವಿಭಾಗದ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪ್ರಸ್ತುತ ಈ ವಿಭಾಗದಲ್ಲಿ ಕಾಫಿ ಬೆಳೆಗಾರರು ತೋಟಕ್ಕೆ ಗೊಬ್ಬರವನ್ನು ಹಾಕ ಬೇಕಿದೆ. ಆದರೆ ರಸ್ತೆಯಲ್ಲಿ ಜಲ್ಲಿ ಹಾಕಲಾಗಿರುವುದರಿಂದ ಯವುದೇ ವಾಹನಗಳು ಇಲ್ಲಿಗೆ ಬರುತ್ತಿಲ್ಲ. ಕೂಡಲೇ ಸಂಬAಧ ಪಟ್ಟ ಇಲಾಖೆ ಮತ್ತು ಗುತ್ತಿಗೆ ದಾರರು ಈ ಕಾಮಗಾರಿ ಯನ್ನು ಪೂರ್ಣ ಗೊಳಿಸ ಬೇಕೆಂದು ಈ ಭಾಗದ ನಿವಾಸಿ ಗಳು ಆಗ್ರಹಿಸಿದ್ದಾರೆ.