ನಾಪೋಕ್ಲು, ಸೆ. ೨: ಕೊರೊನಾ ೩ನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಜನ ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲರೂ ಮುಂಜಾಗೃತೆ ವಹಿಸಿದರೆ ಭಯಪಡುವ ಅಗತ್ಯವಿಲ್ಲ ಎಂದು ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಕುಮಾರ್ ಹೇಳಿದರು.

ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮತ್ತು ನಾಪೋಕ್ಲು ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ-೧೯ ಕಾರ್ಯಪಡೆ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅತಿಯಾದರೆ ಅಮೃತವೂ ವಿಷ ಎಂಬAತೆ ಜನ ಭಯದಿಂದಲೇ ಬದುಕ ಬಾರದು. ಸರಕಾರದ ಮಾರ್ಗಸೂಚಿ ಯನ್ನು ಪಾಲಿಸುವ ಮೂಲಕ ಮುಂಜಾಗೃತಾ ಕ್ರಮ ಅನುಸರಿಸಬೇಕು ಎಂದರು. ಮೂರನೇ ಅಲೆಯಲ್ಲಿ ಶೇ. ೯೦ರಷ್ಟು ಮಕ್ಕಳಿಗೆ ಸಾಮಾನ್ಯ ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡು ಗುಣಮುಖವಾಗುತ್ತದೆ. ಶೇ. ೫ರಷ್ಟು ಮಕ್ಕಳಿಗೆ ಆಕ್ಸಿಜನ್ ಬೇಕಾಗಬಹುದು. ಶೇ. ೩ರಷ್ಟು ಮಕ್ಕಳಿಗೆ ವೆಂಟಿಲೇಟರ್ ಅಗತ್ಯವಾಗಬಹುದು. ಉಳಿದ ಶೇ. ೧ ರಿಂದ ಶೇ. ೨ ಮಕ್ಕಳಿಗೆ ಸಮಸ್ಯೆ ಯಾಗುವ ಸಾಧ್ಯತೆ ಇದೆ ಎಂದರು. ಒಂದನೇ ಮತ್ತು ಎರಡನೇ ಅಲೆಯನ್ನು ನಾವು ನಿರ್ಲಕ್ಷಿಸಿರುವ ಕಾರಣ ಮೂರನೇ ಅಲೆಯ ಭೀತಿ ಉಂಟಾಗಲು ಕಾರಣವಾಗಿದೆ ಎಂದರು. ಡಾ ಸಣ್ಣುವಂಡ ಕಾವೇರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಿ, ಲಸಿಕೆ ಹಾಕುವ ಕಾರ್ಯಕೈ ಗೊಳ್ಳಬೇಕು. ಇಲ್ಲವಾದರೆ ಕೊಡಗಿಗೆ ಗಂಡಾAತರ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು. ಮಡಿಕೇರಿ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ ಹಾಗೂ ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಮಾತ ನಾಡಿದರು. ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ನಾಪೋಕ್ಲು ಹೋಬಳಿ ಕಂದಾಯ ನಿರೀಕ್ಷಕ ರವಿಕುಮಾರ್, ಬಲ್ಲಮಾವಟಿ ಗ್ರಾ.ಪಂ. ಉಪಾಧ್ಯಕ್ಷೆ ಬಾಳೆಯಡ ದೀನಾ ಮಾಯಮ್ಮ, ನೆಲಜಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಯಕಪೂವಂಡ ಅಪ್ಪಚ್ಚು ಇದ್ದರು.