*ಗೋಣಿಕೊಪ್ಪ, ಆ. ೩೧: ರೂ. ೫೦ ಲಕ್ಷ ಅನುದಾನದಲ್ಲಿ ನಿಟ್ಟೂರು ಕಾಲಬೈರೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.

ಒಂದು ಕಿ.ಮೀ. ಉದ್ದ, ೩.೭೫ ಮೀ. ಅಗಲದಲ್ಲಿ ರಸ್ತೆ ಅಭಿವೃದ್ಧಿ ನಡೆಯುವುದರ ಜೊತೆಗೆ ದೇವಸ್ಥಾನದ ಆವರಣದಲ್ಲಿ ಡಾಂಬರೀಕರಣ ಮತ್ತು ವಾಹನ ನಿಲುಗಡೆ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳು ರೂ. ೫೦ ಲಕ್ಷ ಅನುದಾನದಲ್ಲಿ ನಡೆಯುವುದಾಗಿ ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಬಹುತೇಕ ರಸ್ತೆಗಳ ಡಾಂಬರೀಕರಣ ನಡೆದಿವೆ ಎಂದರು.

ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಚಕ್ಕೇರ ಸೂರ್ಯ ಅಯ್ಯಪ್ಪ, ನಿಟ್ಟೂರು ಶಕ್ತಿ ಕೇಂದ್ರ ಪ್ರಮುಖ್ ಶರಿನ್ ಮುತ್ತಣ್ಣ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ರಾಜ್ಯ ಕೃಷಿ ಮೋರ್ಚಾ ಜಿಲ್ಲಾ ಉಸ್ತುವಾರಿ ಮಾಪಂಗಡ ಯಮುನಾ ಚಂಗಪ್ಪ, ವಿಜಯಲಕ್ಷಿ÷್ಮ ಪದವಿಪೂರ್ವ ಕಾಲೇಜು ಅಧ್ಯಕ್ಷ ಬೋಸ್ ಮಂದಣ್ಣ, ಪ್ರಮುಖರಾದ ಮೇಚಂಡ ವಾಸು, ಕಾರ್ಮಾಡು ಸುಬ್ಬಣ್ಣ, ಲೋಕೋಪಯೋಗಿ ಸಹಾಯಕ ಇಂಜಿನಿಯರುಗಳಾದ ಸಣ್ಣುವಂಡ ನವೀನ್, ಸುರೇಶ್ ಹಾಜರಿದ್ದರು.