ಸೋಮವಾರಪೇಟೆ, ಆ. ೩೧: ಇಲ್ಲಿನ ಪಟ್ಟಣ ಪಂಚಾಯಿತಿಯ ಹೈಟೆಕ್ ಮಾರುಕಟ್ಟೆಯ ಮೇಲ್ಚಾವಣಿಯಲ್ಲಿ ನೀರು ಸೋರಿಕೆಯಾಗಿ ಮಾರುಕಟ್ಟೆ ಆವರಣ ಕೆಸರಿನ ಕೆರೆಯಂತಾಗಿದೆ.
ವಾರದ ಸಂತೆ ದಿನವಾದ ಸೋಮವಾರದಂದು ಗ್ರಾಮೀಣ ಭಾಗದಿಂದ ಸಾವಿರಾರು ಮಂದಿ ಸಂತೆಗೆ ಆಗಮಿಸಿದ್ದು, ಕೆಸರು- ಕೊಳಚೆ ನೀರಿನ ನಡುವೆಯೇ ವ್ಯಾಪಾರ ವಹಿವಾಟು ನಡೆಸಿದರು. ಹೈಟೆಕ್ ಮಾರುಕಟ್ಟೆಯ ಛಾವಣಿಯು ಅಲ್ಲಲ್ಲಿ ನೀರು ಸೋರಿಕೆಯಾಗುತ್ತಿದ್ದು, ಮಳೆ ನೀರು ಮಾರುಕಟ್ಟೆಯ ಆವರಣದೊಳಗೆ ಶೇಖರಣೆಯಾದ್ದರಿಂದ ವ್ಯಾಪಾರ ವಹಿವಾಟಿಗೆ ಅಡಚಣೆಯಾಯಿತು.
ಮಾರುಕಟ್ಟೆಯನ್ನು ದುರಸ್ತಿಗೊಳಿಸದ ಪಟ್ಟಣ ಪಂಚಾಯಿತಿ ವಿರುದ್ಧ ವರ್ತಕರು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕನಿಷ್ಟ ಛಾವಣಿಯನ್ನು ರಿಪೇರಿ ಮಾಡಿ ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.