ಕೂಡಿಗೆ, ಆ. ೩೧: ಹಾರಂಗಿ ಜಲಾಶಯದಿಂದ ನಾಲೆ ಮೂಲಕ ಹರಿಸುತ್ತಿರುವ ನೀರಿನ ರಭಸಕ್ಕೆ ನಾಲೆ ಪಕ್ಕದ ಕಚ್ಚಾ ರಸ್ತೆ ನೀರಿನ ಸೆಳೆತಕ್ಕೆ ಕೊರೆತ ಉಂಟಾಗಿದೆ.

ಹಾರAಗಿಯ ಮುಖ್ಯ ನಾಲೆಯ ಕಣಿವೆ ಗ್ರಾಮದ ಎಡ ದಂಡೆಯ ನಾಲೆ ಮತ್ತು ಬಲ ದಂಡೆಯ ನಾಲೆಯ ಮೂಲಕ ಹಾಸನ ಮತ್ತು ಮೈಸೂರು ಜಿಲ್ಲೆಯ ಸಾವಿರಾರು ಎಕರೆ ಪ್ರದೇಶ ಬೇಸಾಯಕ್ಕೆ ನೀರು ಹರಿಸಲಾಗುತ್ತಿದೆ.

ಕಣಿವೆಯ ಸಮೀಪ ಎಡ ದಂಡೆಯ ನಾಲೆಯ ಮೂಲಕ ಕೊಡಗಿನ ಗಡಿ ಭಾಗ ಶಿರಂಗಾಲ ಮತ್ತು ಹಾಸನ ಜಿಲ್ಲೆಯ ಕೆಲವು ಪ್ರದೇಶಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಡದಂಡೆಯ ನಾಲೆಯ ಸಮೀಪದ ಏತ ನೀರಾವರಿ ಯೋಜನೆಯ ಘಟಕದ ಬಳಿ ನೀರಿನ ರಭಸಕ್ಕೆ ರಸ್ತೆಯ ನೀರಿನ ಅಬ್ಬರಕ್ಕೆ ಕೊರೆತ ಉಂಟಾಗಿದೆ. ದುರಸ್ತಿ ಕಾಣದ ನಾಲೆ ಅವ್ಯವಸ್ಥೆಯಿಂದ ರಸ್ತೆ ಅಂಚಿನ ಮಣ್ಣು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಸಂಚಾರಕ್ಕೆ ಆನಾನುಕೂಲ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ರಸ್ತೆ ಸ್ಥಳೀಯ ಎಂಟು ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಲೆ ದಂಡೆಗಳಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.