ಮಡಿಕೇರಿ, ಆ. ೩೧: ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಅಭ್ಯತ್ ಮಂಗಲದ ಒಂಟಿಯAಗಡಿಯಲ್ಲಿ ತಾ. ೨ ರಂದು ದಂಡಿನ ಉತ್ಸವ ನಡೆಯಲಿದೆ. ದೇವಾಲಯ ತಕ್ಕರಾದ ಅಂಚೆಮನೆ ಆದರ್ಶ್ ವಿಶ್ವನಾಥ್ ಅವರ ಮನೆಯಿಂದ ಭಂಡಾರವನ್ನು ಇಳಿಸಿ ನಂತರ ಪೂಜೆಯನ್ನು ಸಲ್ಲಿಸಲಾಗುವುದು. ಹರಕೆ ತೀರಿಸುವವರು ಕೋವಿಡ್ ನಿಯಮಾವಳಿಯೊಂದಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿ ಬರಬೇಕೆಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.