ಕುಶಾಲನಗರ, ಆ. ೩೧: ಕುಶಾಲನಗರದ ವಾಸವಿ ಯುವತಿಯರ ಸಂಘದ ಸದಸ್ಯೆಯರು ನಗರ ಪೊಲೀಸರಿಗೆ ರಾಖಿ ಕಟ್ಟಿ ಸಿಹಿ ಕೊಟ್ಟು ಸಹೋದರತ್ವವನ್ನು ಸಾರಿದರು. ಈ ಸಂದರ್ಭ ಉಪಸ್ಥಿತರಿದ್ದ ಡಿವೈಎಸ್ಪಿ ಶೈಲೇಂದ್ರ ಮಾತನಾಡಿ, ಯಾವುದೇ ಆಕಸ್ಮಿಕ ಸಮಯದಲ್ಲಿ ಆದರೂ ೧೧೨ ನಂಬರಿಗೆ ಸಂಪರ್ಕಿಸಿದರೆ ೧೫ ರಿಂದ ೨೦ ನಿಮಿಷಗಳಲ್ಲಿ ಪೊಲೀಸರು ತಲುಪುವ ವ್ಯವಸ್ಥೆ ಇದೆ. ಅದರಿಂದ ಯಾರು ಆತಂಕದಲ್ಲಿ ಬದುಕುವ ಪ್ರಮೇಯವೇ ಇಲ್ಲ ಎಂದು ತಿಳಿಸಿ, ವಾಸವಿ ಯುವತಿಯರ ಸಂಘದ ಸದಸ್ಯೆರಿಗೆ ಆತ್ಮವಿಶ್ವಾಸದ ಮಾತುಗಳನ್ನು ಆಡಿದರು.

ಸಿಪಿಐ ಮಹೇಶ್ ದೇವರು, ಪಿಎಸೈ ಮಾದೇಶ್, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಕನ್ನಿಕಾ ನಾಗ್, ಕಾರ್ಯದರ್ಶಿ ವತ್ಸಲ ಶ್ರೀನಿವಾಸ್, ಗಾಯತ್ರಿ ಬಾಬು, ಸರಿತಾ ಮುರಳೀಧರ್, ಲಕ್ಷ್ಮಿ ಸುಬ್ಬರಾಜು ಇತರರು ಇದ್ದರು.