ಮಡಿಕೇರಿ, ಆ. ೩೧: ಕೊಡಗು ಪ್ರೆಸ್ಕ್ಲಬ್ ವತಿಯಿಂದ ಕೆ.ಬಿ. ಮಹಾಂತೇಶ್ ಸ್ಮರಣಾರ್ಥ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ೨೦೨೦ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎಚ್.ಟಿ. ಅನಿಲ್ ವರದಿ ಆಯ್ಕೆಯಾಗಿದೆ.
ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಮೂರು ಚಕ್ರ ವಾಹನ ಚಾಲಕರ ಸಂಕಷ್ಟ ನೂರಾರು...’ ಕೋವಿಡ್ ಸಂದರ್ಭ ಆಟೋ ಚಾಲಕರ ಸಂಕಷ್ಟ ಕುರಿತ ವಿಶೇಷ ವರದಿ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಕೊಡಗು ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೫ ಸಾವಿರ ರೂಪಾಯಿ ನಗದು ಹಣದೊಂದಿಗೆ ಪ್ರಶಸ್ತಿ ಫಲಕ ಸಹಿತ ಪುರಸ್ಕಾರ ನೀಡಲಾಗುತ್ತದೆ.
ಸನ್ಮಾನ
ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ೧೭ ಪತ್ರಕರ್ತರನ್ನು ಕೊಡಗು ಪ್ರೆಸ್ಕ್ಲಬ್ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಗುತ್ತದೆ. ಬೊಳ್ಳಜೀರ ಬಿ. ಅಯ್ಯಪ್ಪ, ಯುಗ ದೇವಯ್ಯ, ರಜಿತಾ ಕಾರ್ಯಪ್ಪ, ಎಸ್. ಮಹೇಶ್,
ಅನಿಲ್ಗೆ ಪ್ರೆಸ್ಕ್ಲಬ್ ಪ್ರಶಸ್ತಿ
(ಮೊದಲ ಪುಟದಿಂದ) ಎ.ಎಸ್. ಮುಸ್ತಫಾ, ಸಣ್ಣುವಂಡ ಕಿಶೋರ್ ನಾಚಪ್ಪ, ರೆಜಿತ್ ಕುಮಾರ್ ಗುಹ್ಯ, ಹೆಚ್.ಕೆ. ಜಗದೀಶ್, ಬಾಚರಣಿ ಯಂಡ ಅನು ಕಾರ್ಯಪ್ಪ, ಐಮಂಡ ಗೋಪಾಲ್ ಸೋಮಯ್ಯ, ವಿಶ್ವ ಕುಂಬೂರು, ಹೆಚ್.ಜೆ. ರಾಕೇಶ್, ಆರ್. ಸುಬ್ರಮಣಿ, ಪಳೆಯಂಡ ಪಾರ್ಥ ಚಿಣ್ಣಪ್ಪ, ಹಿರಿಕರ ರವಿ, ವಿಘ್ನೇಶ್ ಭೂತನಕಾಡು ಅವರನ್ನು ಸನ್ಮಾನಿಸಲಾಗುತ್ತದೆ.